ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಯಮಿ ಅರುಣ್ ಆಚಾರ್ಯ, ಯೋಗೀಶ್ ಆಚಾರ್ಯ ಉದ್ಘಾಟಿಸಿದರು. ಅನಿಲ್ ಮಸ್ಕರೇನ್ಹಸ್, ಸಿ.ಎಂ.ದ್ವಿಜಯ್, ರಾಮಚಂದ್ರ ಆಚಾರ್ಯ, ಪ್ರದೀಪ್ ಕಿಚ್ಚಬ್ಬಿ ಇದ್ದರು. 
ಚಿಕ್ಕಮಗಳೂರು

ಕ್ರೀಡಾಕೂಟದಿಂದ ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ

ಬಾಳೆಹೊನ್ನೂರು: ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡಾಕೂಟಗಳಿಂದ ಗ್ರಾಮೀಣ ಪ್ರತಿಭೆಗಳಿಗೆ ವಿಶೇಷ ಪ್ರೋತ್ಸಾಹ ದೊರೆಯಲಿದೆ ಎಂದು ಬೆಂಗಳೂರಿನ ಯುವ ಉದ್ಯಮಿ ಅನಿಲ್ ಮಸ್ಕರೇನ್ಹಸ್ ಹೇಳಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಶಾರಾಮ್ ಕ್ಯಾಮರಾ ಕ್ಲೌಡ್ ತಂಡ ಆಯೋಜಿಸಿದ್ದ ಬಾಳೆಹೊನ್ನೂರು ವಾಲಿಬಾಲ್ ಲೀಗ್ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 
ಗ್ರಾಮೀಣ ಭಾಗದಲ್ಲಿ ಹಲವು ಉತ್ತಮ ಪ್ರತಿಭೆಗಳಿದ್ದು ಅವರಿಗೆ ವೇದಿಕೆ ದೊರೆತಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಸಾಧನೆ ಮಾಡಲು ಸಾಧ್ಯವಿದೆ. ಇದಕ್ಕೆ ಸ್ಥಳೀಯವಾಗಿ ಮೊದಲು ಅವಕಾಶಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಈ ಪಂದ್ಯಾವಳಿ ಪೂರಕ ಎಂದರು.  ಭರತನಾಟ್ಯ ಶಿಕ್ಷಕಿ ಮಂಜುಳಾ, ನೃತ್ಯ ನಿರ್ದೇಶಕ ಗಣೇಶ್, ಯೂಟ್ಯೂಬರ್ ಸುಮಂತ್ ಮಲ್ನಾಡ್, ಐಎಸ್‌ಪಿಎಲ್ ಆಟಗಾರ ಪ್ರಜ್ವಲ್ ಅವರನ್ನು ಸನ್ಮಾನಿಸಲಾಯಿತು. 
ಪಂದ್ಯಾವಳಿಯಲ್ಲಿ 8 ಪ್ರಾಂಚೈಸಿ ತಂಡಗಳು ಭಾಗವಹಿಸಿದ್ದು ಅಥರ್ವ ಶೃಂಗೇರಿ ತಂಡ ಪ್ರಥಮ, ಸಿದ್ದೇಶ್ವರ ಸೀಕೆ ತಂಡ ದ್ವಿತೀಯ, ನಿಜಾಮ್ ಫ್ರೆಂಡ್ಸ್ ತೃತೀಯ, ಎಂಎಸ್‌ಬಿ ಬಾಳೆಹೊನ್ನೂರು ತಂಡ ಚತುರ್ಥ ಸ್ಥಾನ ಪಡೆದವು. ವಿಜೇತರಿಗೆ ನಗದು, ಟ್ರೋಫಿ ನೀಡಲಾಯಿತು.
ಶಾರಾಮ್ ಕ್ಯಾಮರಾ ಕ್ಲೌಡ್ ಮುಖ್ಯಸ್ಥ ರಾಮಚಂದ್ರ ಆಚಾರ್ಯ, ಉದ್ಯಮಿಗಳಾದ ಅರುಣ್ ಆಚಾರ್ಯ, ಯೋಗೀಶ್ ಆಚಾರ್ಯ, ತಾಲೂಕು ರೈತ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕಿಚ್ಚಬ್ಬಿ, ಜೆಸಿಐ ಅಧ್ಯಕ್ಷ ಸನತ್ ಶೆಟ್ಟಿ, ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್, ಆಯೋಜಕರಾದ ಕಿಶೋರ್ ಆಚಾರ್ಯ, ಸವಿನ್ ಆಚಾರ್ಯ, ಸುಭಾಷ್ ಆಚಾರ್ಯ, ಪ್ರಮುಖರಾದ ಹಿರಿಯಣ್ಣ, ಬಾಬು ಪೂಜಾರಿ, ಪ್ರಕಾಶ್ ಆಚಾರ್ಯ, ಚೈತನ್ಯ ವೆಂಕಿ, ಜಗದೀಶ್ ಅರಳೀಕೊಪ್ಪ ಮತ್ತಿತರರಿದ್ದರು.