ಬಾಳೆಹೊನ್ನೂರು ಕಲಾರಂಗ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸರ್ವಧರ್ಮ ಕಪ್ ಟೆನಿಸ್‌ಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಟಿ.ಎಂ.ಬಶೀರ್, ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ಮಹೇಶ್ ಆಚಾರ್ಯ, ಸಿದ್ದಿಕ್, ನಾಗರಾಜ ಭಟ್, ಜೆಸ್ಸಿ ಲೋಬೋ ಮತ್ತಿತರರಿದ್ದರು. 
ಚಿಕ್ಕಮಗಳೂರು

ಸರ್ವಾಂಗೀಣ ವಿಕಾಸಕ್ಕೆ ಕ್ರೀಡೆ ಸಹಕಾರಿ

ಬಾಳೆಹೊನ್ನೂರು: ಮನುಜರ ಸರ್ವಾಂಗೀಣ ವಿಕಾಸಕ್ಕೆ ಕ್ರೀಡೆ ಸಹಕಾರಿಯಾಗಿದ್ದು ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನ್ೀ ಹೇಳಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಸರ್ವಧರ್ಮ ಗೆಳೆಯರ ಬಳಗದಿಂದ ಆಯೋಜಿಸಿದ್ದ ಸರ್ವ ಧರ್ಮ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
 ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಬಾಳೆಹೊನ್ನೂರಿನಲ್ಲಿ ಸಮಾನಮನಸ್ಕ ಯುವಕರು ಸೇರ್ಪಡೆಗೊಂಡು ಈ ವ್ಯಾಪ್ತಿಯ ಯುವ ಕ್ರೀಡಾಪಟುಗಳಿಗಾಗಿ ಸರ್ವಧರ್ಮ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ. ಸರ್ವಧರ್ಮದ ಯುವಕರು ಒಗ್ಗೂಡಿ ಪರಸ್ಪರ ಸ್ನೇಹ, ಪ್ರೀತಿ, ಬಾಂಧವ್ಯದಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಸಾಮರಸ್ಯ ಮೆರೆದಿರುವುದು ಶ್ಲಾಘನೀಯ ಎಂದರು.
ಪಂದ್ಯಾವಳಿಯಲ್ಲಿ ಮಸೀದಿಕೆರೆ ತಂಡ ಪ್ರಥಮ ಸ್ಥಾನದೊಂದಿಗೆ 50 ಸಾವಿರ ರೂ. ನಗದು, ವಿವೇಕನಗರ ತಂಡ ದ್ವಿತೀಯ ಸ್ಥಾನದೊಂದಿಗೆ 25 ಸಾವಿರ ರೂ. ನಗದು, ಹೂವಿನಹಕ್ಲು ತಂಡ ತೃತೀಯ ಸ್ಥಾನದೊಂದಿಗೆ 5 ಸಾವಿರ ರೂ. ನಗದು, ಕರಗಣೆ ತಂಡ ಚತುರ್ಥ ಸ್ಥಾನದೊಂದಿಗೆ ಬಹುಮಾನ ಪಡೆಯಿತು.
ವಿಜಯ್ ಹೂವಿನಹಕ್ಲು ಸರಣಿ ಶ್ರೇಷ್ಠ, ಸಂಜು ವಿವೇಕನಗರ ಬೆಸ್ಟ್ ಕೀಪರ್, ಗಣೇಶ್ ಬೆಸ್ಟ್ ಬ್ಯಾಟ್ಸ್‌ಮನ್, ಪ್ರವೀಣ್ ವಿವೇಕನಗರ ಬೆಸ್ಟ್ ಬೌಲರ್, ಚೇತು ಪೂಜಾರಿ ಕೂವೆ ಬೆಸ್ಟ್ ಫೀಲ್ಡರ್ ಪ್ರಶಸ್ತಿ ಪಡೆದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ಜೋಸ್ೆ ಜಾಯ್(ಆರೋಗ್ಯ ರತ್ನ), ಯತೀ ಶ್ಯಾಮ್(ಕ್ರೀಡಾ ರತ್ನ), ಕೃಷ್ಣಪ್ಪ ಮೆಣಸುಕೊಡಿಗೆ(ಸೇವಾ ರತ್ನ) ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಗುತ್ತಿಗೆದಾರ ಟಿ.ಎಂ.ಬಶೀರ್, ಗ್ರಾಪಂ ಮಾಜಿ ಸದಸ್ಯರಾದ ಎಂ.ಎಸ್.ಅರುಣೇಶ್, ಇಬ್ರಾಹಿಂ ಶಾಫಿ, ಮಹೇಶ್ ಆಚಾರ್ಯ, ಸಿದ್ದಿಕ್, ನಾಗರಾಜ್ ಭಟ್, ಜೆಸ್ಸಿ ಲೋಬೋ, ಆಯೋಜಕ ರಶೀದ್ ಮೆಣಸುಕೊಡಿಗೆ, ಹಸನ್, ಅಾನ್, ರಶೀದ್ ಮಸೀದಿಕೆರೆ, ಜಗದೀಶ್ ಅರಳೀಕೊಪ್ಪ ಮತ್ತಿತರರಿದ್ದರು.