ಕಡೂರು ತಾಲೂಕು ಕಂಸಾಗರ ಗ್ರಾಮದಲ್ಲಿ ಮಣ್ಣು ಪರೀಕ್ಷೆ ಮತ್ತು ಭೂಮಿ ಲವತ್ತತೆ ಕುರಿತು ಭೂ ಸಂಪನ್ಮೂಲ ಮಾಹಿತಿ ತರಬೇತಿ ಕಾರ್ಯಕ್ರಮ ನಡೆಯಿತು. ಕಂಸಾಗರ ರೇವಣ್ಣ, ಕೆ.ಟಿ.ಶಿವಸ್ವಾಮಿ, ಪ್ರಕಾಶ್, ಜಯಣ್ಣ, ಕೆ.ಎನ್.ಭರತ್, ಕುಮಾರಸ್ವಾಮಿ, ಆನಂದ್, ಸಹನಾ ಮತ್ತಿತರರಿದ್ದರು. 
ಚಿಕ್ಕಮಗಳೂರು

ಮಣ್ಣಿನ ಉತ್ಪಾದನಾ ಸಾಮರ್ಥ್ಯ ಪ್ರಮುಖ (bank)

ಜಿ. ಗಜೇಂದ್ರ
ಕಡೂರು: ಕೃಷಿಯನ್ನು ಲಾಭದಾಯಕವಾಗಿ ಮಾಡುವಲ್ಲಿ ಮಣ್ಣಿನ ಉತ್ಪಾದನಾ ಸಾಮರ್ಥ್ಯ ಪ್ರಮುಖ ಪಾತ್ರವಹಿಸುತ್ತದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕಂಸಾಗರ ರೇವಣ್ಣ ಹೇಳಿದರು.
ಕಂಸಾಗರ ಗ್ರಾಮದಲ್ಲಿ ಬುಧವಾರ ವಿಶ್ವಬ್ಯಾಂಕ್ ನೆರವಿನ ರಿವಾರ್ಡ್ ಜಲಾನಯನ ಅಭಿವೃದ್ಧಿ ಯೋಜನೆಯಡಿ ಮಣ್ಣು ಪರೀಕ್ಷೆ ಮತ್ತು ಭೂಮಿ ಲವತ್ತತೆ ಕುರಿತು ಭೂ ಸಂಪನ್ಮೂಲ ಮಾಹಿತಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ, ಮಣ್ಣಿನ ಗುಣಲಕ್ಷಣ, ಆರೋಗ್ಯ ಮತ್ತು ಪ್ರಮುಖವಾಗಿ ಲವತ್ತತೆ ಅವಲಂಬಿಸಿದೆ ಎಂದರು.
ನಮ್ಮ ಪೂರ್ವಜರು ಮಣ್ಣಿನ ಲವತ್ತತೆಗೆ ಒತ್ತು ಕೊಡುತ್ತಿದ್ದರು. ಇದೀಗ ಅತಿಯಾದ ರಾಸಾಯನಿಕ ಬಳಕೆಯಿಂದ ಮಣ್ಣಿನ ಸತ್ವ ಕಳೆದುಕೊಳ್ಳುವಂತಾಗಿದೆ. ಈ ನಿಟ್ಟಿನಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ನೀಡುತ್ತಿರುವ ಮಣ್ಣಿನ ಗುಣಲಕ್ಷಣದ ಪೂರಕ ಮಾಹಿತಿ ಪಡೆದುಕೊಂಡು ಮಣ್ಣಿನ ಸ್ಥಿತಿಗತಿಗಳನ್ನು ಕಾಪಾಡಿಕೊಳ್ಳಬೇಕಿದೆ ಎಂದು ತಿಳಿಸಿದರು. 
ಗ್ರಾಮದ ಮುಖಂಡರಾದ ಪ್ರಕಾಶ್, ಜಯಣ್ಣ, ಕೆ.ಎನ್.ಭರತ್, ಭೂಸಂಪನ್ಮೂಲ ಪ್ರಬಂಧಕರಾದ ಕುಮಾರಸ್ವಾಮಿ, ಆನಂದ್, ಸಹನಾ, ಆಶಾ, ರತ್ನಾ ಮತ್ತಿತರರಿದ್ದರು.