ಎನ್.ಆರ್.ಪುರ ತಾಲೂಕು ಮಡಬೂರಿನಲ್ಲಿ ಏರ್ಪಡಿಸಿದ್ದ ಮಧ್ಯವಾರ್ಷಿಕ ಸಮ್ಮೇಳನವನ್ನು ಪ್ರಜ್ವಲ್ ಎಸ್. ಜೈನ್ ಉದ್ಘಾಟಿಸಿದರು. ಎಸ್.ಜಗದೀಶ್, ಅಶೋಕ್, ಶ್ರುತಿ ರೋಹಿತ್, ಆದರ್ಶ ಬಿ. ಗೌಡ, ರಜಿತ್ ವಗಡೆ, ಪ್ರೀತಂ ಇತರರಿದ್ದರು. 
ಚಿಕ್ಕಮಗಳೂರು

ಜೀವನ ರೂಪಿಸಿಕೊಳ್ಳಲು ನೈಪುಣ್ಯ ಮುಖ್ಯ

ಎನ್.ಆರ್.ಪುರ: ಉದ್ಯೋಗ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯುವಜನರಿಗೆ ಅನೇಕ ಸವಾಲುಗಳು ಎದುರಾಗಲಿವೆ. ಅದೇ ರೀತಿ ಅವಕಾಶಗಳೂ ಲಭ್ಯವಾಗಲಿವೆ ಎಂದು ಉದ್ಯಮಿ ಬೆಂಗಳೂರಿನ ಸಂತೋಷ್ ಕೆಂಚಾಂಬ ತಿಳಿಸಿದರು.
ಮಡಬೂರು ಡಿಎನ್‌ವಿ ಸಮುದಾಯ ಭವನದಲ್ಲಿ ಜೆಸಿಐ ಎನ್.ಆರ್.ಪುರ ಜ್ವಾಲಾಮಾಲಿನಿ ಆಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. 
ಭಾರತದಲ್ಲಿ ಪ್ರತಿವರ್ಷ 1 ಕೋಟಿ ಜನರು ಪದವಿ ಪಡೆದು ಹೊರಬರುತ್ತಾರೆ. ಅವರಲ್ಲಿ ಶೇ.10ರಷ್ಟು ಯುವಜನರಿಗೂ ಉದ್ಯೋಗ ಸಿಗುತ್ತಿಲ್ಲ. ನೈಪುಣ್ಯತೆ ಇದ್ದವರಿಗೆ ಜೀವನ ರೂಪಿಸಿಕೊಳ್ಳಲು ಯಾವುದೇ ತೊಂದರೆ ಇಲ್ಲ. ನಮ್ಮ ದೇಶದಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ ಎಂದರು. ಸಮಾರಂಭ ಉದ್ಘಾಟಿಸಿದ ಜೇಸಿ ವಲಯ 14ರ ಅಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಮಾತನಾಡಿ, ಜೇಸಿ ಸಂಸ್ಥೆಯಿಂದ ಸಮಾಜದಲ್ಲಿ ಬದಲಾವಣೆಯಾಗಲಿದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಕಣಿವೆ ವಿನಯ ಮಾತನಾಡಿ, ಜೇಸಿ ಸಂಸ್ಥೆಯು ನಾಯಕತ್ವ ಗುಣ ಕಲಿಸುತ್ತದೆ ಎಂದು ಹೇಳಿದರು. ಜೇಸಿ ವಲಯ 14ರ ಪೂರ್ವ ವಲಯ ಅಧ್ಯಕ್ಷ ಭದ್ರೇಶ್ ಮಾತನಾಡಿ, 17 ವರ್ಷದ ನಂತರ ಮತ್ತೆ ಮಧ್ಯವಾರ್ಷಿಕ ಸಮ್ಮೇಳನ ನಡೆದಿದೆ ಎಂದರು. 
ಸೀನಿಯರ್ ಜೇಸಿ ಚೇರ್ಮನ್ ಆನಂದ್, ಜೇಸಿ ವಲಯ 14 ರೀಜನ್ ಸಿ ವಲಯದ ಉಪಾಧ್ಯಕ್ಷ ಎಸ್.ಜಗದೀಶ್, ಜೇಸಿ ವಲಯ 14ರ ಉಪಾಧ್ಯಕ್ಷ ಅಶೋಕ್, ವಲಯ ಕಾರ್ಯದರ್ಶಿ ಶ್ರುತಿ ರೋಹಿತ್, ಎನ್.ಆರ್.ಪುರ ಜ್ವಾಲಾಮಾಲಿನಿ ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ. ಗೌಡ, ಕಾರ್ಯದರ್ಶಿ ರಜಿತ್ ವಗಡೆ, ಸಮ್ಮೇಳನ ನಿರ್ದೇಶಕ ಪ್ರೀತಂ ಇತರರಿದ್ದರು. ಇದೇ ಸಂದರ್ಭದಲ್ಲಿ 6 ತಿಂಗಳಲ್ಲಿ ಸಾಧನೆ ಮಾಡಿದ ವಿವಿಧ ಜೇಸಿ ಘಟಕಗಳಿಗೆ ಪ್ರಶಸ್ತಿ ನೀಡಲಾಯಿತು.