ಕಡೂರಿನ ಯಳನಡು ಮಠದಲ್ಲಿ ಶರಣರ ಬೆಳದಿಂಗಳು ಕಾರ್ಯಕ್ರಮವನ್ನು ಎಂ.ರಂಗಪ್ಪ ಉದ್ಘಾಟಿಸಿದರು. ಯಳನಡು ಶ್ರೀಗಳು, ಹೊಸೂರು ಪುಟ್ಟರಾಜು, ವಿರೂಪಾಕ್ಷಪ್ಪ ಮತ್ತಿತರರಿದ್ದರು. 
ಚಿಕ್ಕಮಗಳೂರು

ಶಿವಯೋಗ, ಕರ್ಮಯೋಗಗಳ ಸಂಗಮ ಸಿದ್ಧರಾಮೇಶ್ವರರು

 ಕಡೂರು: ಸಿದ್ಧರಾಮೇಶ್ವರರ ವಚನಗಳಲ್ಲಿ ಆದರ್ಶ ಬದುಕಿಗೆ ಬೇಕಾದ ಅನೇಕ ವಿಚಾರಗಳು ಅಡಕವಾಗಿವೆ ಎಂದು ಸಾಹಿತಿ ಹೊಸೂರು ಪುಟ್ಟರಾಜು ತಿಳಿಸಿದರು.
ಪಟ್ಟಣದ ಯಳನಡು ಮಠದಲ್ಲಿ ಮಂಗಳವಾರ ಶರಣ ಸಾಹಿತ್ಯ ಪರಿಷತ್‌ನಿಂದ ನಡೆದ ಶರಣರ ಬೆಳದಿಂಗಳು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿ, ಸಿದ್ದರಾಮರು ಶಿವಯೋಗಿ ಮಾತ್ರವಾಗಿರದೆ ಕರ್ಮಯೋಗಿಯೂ ಆಗಿದ್ದು ಶಿವಯೋಗ, ಕರ್ಮಯೋಗಗಳ ಸಂಗಮ ಸಿದ್ಧರಾಮೇಶ್ವರರು ಎಂದರು.
 ಶ್ರೀ ಸಿದ್ಧರಾಮನಿಗೆ ಶ್ರೀಶೈಲದ ಮಲ್ಲಯ್ಯನೇ ಜಂಗಮವಾಗಿ ಬಂದು ದರ್ಶನ ನೀಡುತ್ತಾನೆ. ಶ್ರೀಶೈಲಕ್ಕೆ ಹೊರಟ ಶ್ರೀ ಸಿದ್ಧರಾಮ ಸಾಕ್ಷಾತ್ಕಾರಗೊಳಿಸಿಕೊಳ್ಳುತ್ತಾನೆ. ಸೊನ್ನಲಿಗೆಗೆ ಹಿಂದಿರುಗಿ ತನ್ನ ಕರ್ಮಯೋಗದ ಅನುಷ್ಠಾನವನ್ನು ಪ್ರಾರಂಭಿಸುತ್ತಾನೆ. ಬಸವಣ್ಣನವರನ್ನು ಬಿಟ್ಟರೆ ಅತ್ಯಂತ ಪ್ರಭಾವಶಾಲಿ ಶರಣನೆಂದರೆ ಶ್ರೀ ಸಿದ್ದರಾಮೇಶ್ವರರು ಎಂದು ಹೇಳಿದರು.
ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಿ.ಪಿ.ಪ್ರಕಾಶ್, ಎಂ.ರಂಗಪ್ಪ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರುಪಾಕ್ಷಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆ ಮಲ್ಲಪ್ಪ, ಎಸ್.ವಿ.ಪರಮೇಶ್ವರಪ್ಪ, ಸಖರಾಯಪಟ್ಟಣ ಹೋಬಳಿ ಅಧ್ಯಕ್ಷ ಎಸ್.ರುದ್ರಪ್ಪ, ಬೀರೂರು ಹೋಬಳಿ ಅಧ್ಯಕ್ಷ ಜಿ.ಇ.ಶಿವಲಿಂಗಪ್ಪ, ಪುಷ್ಪಾ ಸುಬ್ರಹ್ಮಣ್ಯ, ಹೋಬಳಿ ಅಧ್ಯಕ್ಷ ಕುಶಕುಮಾರ್, ಜಿ.ಟಿ.ರಾಜಶೇಖರ ಭಾನುಮೂರ್ತಿ, ಜಿ.ಬಿ.ಆನಂದಮೂರ್ತಿ, ಎ.ಇ.ಮೋಹನ್‌ಕುಮಾರ್, ವೀಣಾ ಈಶ್ವರಪ್ಪ, ರಂಗಾಪುರದ ಮಂಜುನಾಥ್, ಆಸಂದಿ ಶಂಕರಪ್ಪ ಮತ್ತಿತರರಿದ್ದರು.