ಎನ್.ಆರ್.ಪುರದ ಶೆಟ್ಟಿ ಕೊಪ್ಪ ಸರ್ಕಾರಿ ಶಾಲೆ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ಗಿಡಗಳನ್ನು ನೆಡುತ್ತಿರುವುದು.
ಎನ್.ಆರ್.ಪುರ: ಪ್ರತಿಯೊಂದು ಊರಿನ ಶಾಲೆಗಳು ದೇಗುಲದಂತೆ. ಶಾಲೆ ಮುಂಭಾಗದಲ್ಲಿ ಹೂದೋಟಗಳು, ಕೈದೋಟಗಳು ಇದ್ದರೆ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗೆ ಸಹಕಾರಿಯಾಗಲಿದೆ ಎಂದು ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯಶಿಕ್ಷಕಿ ಪೆನಿನಾ ಹೇಳಿದರು.
ಶೆಟ್ಟಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಶಾಲೆ ಹಳೆ ವಿದ್ಯಾರ್ಥಿಗಳು ಶಾಲೆ ಮುಂಭಾಗದಲ್ಲಿ ಹೂದೋಟ ನಿರ್ಮಿಸಲು ನೀಡಿದ ಹೂವಿನ ಹಾಗೂ ಇತರೆ ಅಲಂಕಾರಿಕ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿ, ಹಳೆ ವಿದ್ಯಾರ್ಥಿಗಳು ತಾನು ಓದಿದ ಶಾಲೆಯನ್ನು ನೆನಪಿಟ್ಟುಕೊಂಡು, ಶಾಲೆ ಅಭಿವೃದ್ಧಿಗೆ ಕೈಜೋಡಿಸುತ್ತಿರುವುದು ಸಂತಸದ ವಿಚಾರ. ತಾವು ಓದಿದ ಶಾಲೆ, ವಿದ್ಯೆ ಕಲಿಸಿದ ಗುರುಗಳನ್ನು ಎಂದಿಗೂ ಮರೆಯಬಾರದು ಎಂದರು.
ದಾನಿ ಎಲ್ದೋ ಮಾತನಾಡಿ, ಶಾಲೆ ಮುಂಭಾಗ ಸಾಕಷ್ಟು ಜಾಗವಿದೆ. ಅದನ್ನು ಹೂದೋಟ ಮಾಡಬೇಕು ಎಂಬ ನನ್ನ ಕನಸಿಗೆ 10 ಹಳೆ ವಿದ್ಯಾರ್ಥಿಗಳು ಕೈಜೋಡಿಸಿದರು. ಅದರಂತೆ ಇಂದು ಹೂವು ಹಾಗೂ ಅಲಂಕಾರಿಕ ಗಿಡಗಳನ್ನು ತಂದು ನೆಟ್ಟು, ಹೂ ತೋಟ ನಿರ್ಮಿಸಲಾಗುತ್ತಿದೆ.ಎಂದರು.
ದಾನಿಗಳಾದ ಸಚಿನ್,ಸುಲೈಮಾನ್, ಪಿ.ಟಿ.ಜೇಮ್ಸ್, ರವಿಚಂದ್ರ, ಆರ್.ಸಾಜು, ಏಲಿಯಾಸ್, ಕರುಗುಂದ ನಂದೀಶ್, ಶಾಲಾ ಶಿಕ್ಷಕರಾದ ಮಲ್ಲಿಕಾರ್ಜುನ್, ಅರುಣ್‌ಕುಮಾರ್, ಶಿಕ್ಷಕಿ ರಾಧಾಮಣಿ, ಗಾಯಿತ್ರಿ, ಶುಭ ಇದ್ದರು.