ಶೃಂಗೇರಿಯಲ್ಲಿ ಸಾವಿತ್ರಿಬಾಯಿ ುಲೆ ಜಯಂತಿ ಆಚರಣೆ ಅಂಗವಾಗಿ ಆಯೋಜಿಸಿದ್ದ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಿಕ್ಷಕಿಯರಾದ ಭಾಗ್ಯವತಿ ಮತ್ತು ಮೈತ್ರಿ ಅವರನ್ನು ಗೌರವಿಸಲಾಯಿತು. ಸುಮಾ ಸೋಮಶೇಖರ್, ರೇಣುಕಾರಾಮಪ್ಪ, ಪ್ರಮೀಳಾ, ನೇತ್ರಾವತಿ ಇತರರಿದ್ದರು.
ಶೃಂಗೇರಿ: ಸಾವಿತ್ರಿಬಾಯಿ ುಲೆ ಶಿಕ್ಷಣ ತಜ್ಞೆಯಾಗಿ ಸಮಾಜದ ಸುಧಾರಣೆಗಾಗಿ ಹೋರಾಡಿದ ದಿಟ್ಟ ಮಹಿಳೆ. ಸಾಮಾಜಿಕ ಹೋರಾಟದ ಮೂಲಕ ಮಹಿಳೆಯರ ಸಮಸ್ಯೆಗಳಿಗೆ ಪರಿಹಾರ ನೀಡಿದ ಸಾವಿತ್ರಿಬಾಯಿ ುಲೆ ಅವರ ಧೀಮಂತ ವ್ಯಕ್ತಿತ್ವ ಆದರ್ಶನೀಯ ಎಂದು ಪಠ್ಯಪುಸ್ತಕ ರಚನಾ ಸಮಿತಿ ಮುಖ್ಯಸ್ಥ ಆರ್.ಡಿ.ರವೀಂದ್ರ ತಿಳಿಸಿದರು.
ಕನ್ನಡಭವನದಲ್ಲಿ ಶನಿವಾರ ತಾಲೂಕು ಕಸಾಪ ಮಹಿಳಾ ಘಟಕ ಸಾವಿತ್ರಿಬಾಯಿ ುಲೆ ಅವರ ಜಯಂತಿ ಆಚರಣೆ ಅಂಗವಾಗಿ ಆಯೋಜಿಸಿದ್ದ ಅಕ್ಷರದವ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
1848ರಲ್ಲಿ ಪುಣೆಯಲ್ಲಿ ಬಾಲಕಿಯರಿಗಾಗಿ ಮೊದಲ ಶಾಲೆ ಸ್ಥಾಪಿಸಿದ ಅವರು ವಿಧವೆಯರು ಹಾಗೂ ಆನಾಥರಿಗಾಗಿ ಶಾಲಾ-ಆಶ್ರಮವನ್ನು ತೆರೆದು ಬಾಲ್ಯವಿವಾಹದ ವಿರುದ್ಧ ಹೋರಾಡಿದ ಸಮಾಜ ಸುಧಾರಕಿ. ಸತಿ ಪದ್ಧತಿ, ಬಾಲ್ಯವಿವಾಹದ ವಿರುದ್ಧ ಹೋರಾಟ ಮಾಡಿದ ಅವರು ಕಾವ್ಯುಲೆ ಮತ್ತು ಭವನ್ ಕಾಶಿ ಸುಬೋಧ ರತ್ನ ಎಂಬ ಕೃತಿಯನ್ನು ರಚಿಸಿದರು. ಮಹಿಳಾ ಸಬಲೀಕರಣದ ಸಂಕೇತವಾಗಿರುವ ಸಾವಿತ್ರಿಬಾಯಿ ುಲೆ ಅವರ ನಿಸ್ವಾರ್ಥಸೇವೆ ಸದಾ ಸ್ಮರಣೀಯ ಎಂದರು.
ಶಿಕ್ಷಕಿಯರಾದ ಮೈತ್ರಿ ಮತ್ತು ಭಾಗ್ಯವತಿ ಅವರನ್ನು ಗೌರವಿಸಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಆಗುಂಬೆ ಗಣೇಶ್ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ವರಲಕ್ಷ್ಮೀ, ತಾಲೂಕು ಕಸಾಪ ಮಾಜಿ ಅಧ್ಯಕ್ಷೆ ಶೈಲಜಾ ರತ್ನಾಕರ ಹೆಗಡೆ, ಜಿಲ್ಲಾ ಕಸಾಪ ಸಂಚಾಲಕಿ ಪುಷ್ಪಾ ಲಕ್ಷ್ಮೀನಾರಾಯಣ್, ತಾಲೂಕು ಕಸಬಾ ಹೋಬಳಿ ಅಧ್ಯಕ್ಷ ದಿನೇಶ್ ಅಂಗುರ್ಡಿ, ಮಾಜಿ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಉಪಾಧ್ಯಕ್ಷೆ ಕಲಾ ರಮೇಶ್, ಕಸಾಪ ಪ್ರಧಾನ ಕಾರ್ಯದರ್ಶಿ ರಮೇಶ್ ಶೂನ್ಯ ಇದ್ದರು.