ಪ್ರಮುಖ ಮುಖ್ಯಾಂಶಗಳು
ಕಡೂರು: ಕುಂಬಾರ ಸಮುದಾಯಕ್ಕೆ ನಿವೇಶನ ಒದಗಿಸಿಕೊಡುವಂತೆ ತಾಲೂಕು ಕುಂಬಾರ ಸಂಘದ ಪದಾಧಿಕಾರಿಗಳು ಶಾಸಕ ಕೆ.ಎಸ್.ಆನಂದ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು. ಅಧ್ಯಕ್ಷ ಸಿ.ಬಿ.ಶಿವಪ್ಪ ಮಾತನಾಡಿ, ತಾಲೂಕಿನಲ್ಲಿ ಸುಮಾರು 45 ಹಳ್ಳಿಗಳಲ್ಲಿ ಕುಂಬಾರ ಕುಟುಂಬಗಳು ವಾಸವಿದ್ದು, ಅಂದಾಜು 6 ಸಾವಿರ ಜನಸಂಖ್ಯೆ ಇದೆ. ಕುಲಕಸುಬು ಮಣ್ಣಿನ ಮಡಿಕೆ, ಗಣೇಶ ವಿಗ್ರಹ ತಯಾರಿಕೆ ಜತೆಗೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ತಾಲೂಕಿನಲ್ಲಿ ಯಾವುದೇ ಸಭೆ, ಸಮಾರಂಭ ನಡೆಸಲು ಸಮುದಾಯಕ್ಕೆ ಭವನ ಕೊರತೆ ಎದುರಾಗಿದೆ. ಸಮಾಜವು ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ಜಾಗ ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದೇಶ್ವರಸ್ವಾಮಿ, ಹಿರಿಯ ಮುಖಂಡರಾದ ಓಂಕಾರಪ್ಪ, ಮಲ್ಲಿಕಾರ್ಜುನ್ ಇತರರಿದ್ದರು.