ಎನ್.ಆರ್.ಪುರ ತಾಲೂಕು ಗುಬ್ಬಿಗಾ, ಅರಳಿಕೊಪ್ಪ ಗ್ರಾಮಸ್ಥರು ಕೊಪ್ಪ ಡಿಎ್ಒ ಶಿವಶಂಕರ್ ಹಾಗೂ ಎಸಿಎ್ ಪ್ರವೀಣ್‌ಗೆ ಮನವಿ ಸಲ್ಲಿಸಿದರು.
- ಸಿದ್ಧನಕೊಡಿಗೆ
- ಮಕ್ಕಳನ್ನು ಅಟ್ಟಿಸಿಕೊಂಡು ಬಂದಿದ್ದ
ಎನ್.ಆರ್.ಪುರ: ಸಿದ್ಧನಕೊಡಿಗೆ ಸಮೀಪ ಶಾಲೆಗೆ ಹೋಗುತ್ತಿದ್ದ ಮಕ್ಕಳನ್ನು ಮಂಗಳವಾರ ಅಟ್ಟಿಸಿಕೊಂಡು ಬಂದಿದ್ದ ಒಂಟಿ ಆನೆಯನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಗುಬ್ಬಿಗಾ, ಅರಳಿಕೊಪ್ಪ ಗ್ರಾಮಸ್ಥರು ಕೊಪ್ಪ ಡಿಎ್ಒ ಶಿವಶಂಕರ್ ಹಾಗೂ ಎಸಿಎ್ ಪ್ರವೀಣ್ ಅವರಿಗೆ ಮನವಿ ಸಲ್ಲಿಸಿದರು.
ಒಂಟಿ ಸಲಗ ಕೆಲವು ತಿಂಗಳಿಂದ ಗುಡಿಕೆರೆ, ಮಾವಿನಮನೆ, ವಂದಲಕೊಪ್ಪ, ಕೋಡಿಹಳ್ಳಿ, ಟಂಕಬೈಲು, ಸಿದ್ಧನಕೊಡಿಗೆ, ಗುಬ್ಬಿಗಾ, ವಗ್ಗಡೆ, ಅರಳಿಕೊಪ್ಪ, ಸಂಕ್ಸೆ ಭಾಗದಲ್ಲಿ ತೋಟಗಳಿಗೆ ನುಗ್ಗಿ ಅಡಿಕೆ, ಬಾಳೆ, ತೆಂಗು ಹಾಗೂ ನಾಟಿ ಮಾಡಿದ ಭತ್ತದ ಗದ್ದೆ ಹಾಳು ಮಾಡಿದೆ. ಆದ್ದರಿಂದ ಕಾಡಾನೆಯನ್ನು ಹಿಡಿದು ಸ್ಥಳಾಂತರ ಮಾಡಿ ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ಕೊಪ್ಪ ಡಿಎ್ಒ ಶಿವಶಂಕರ್ ಮಾತನಾಡಿ, ಶಾಸಕರೊಂದಿಗೆ ಚರ್ಚೆ ನಡೆಸಿ ಆನೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಒಂಟಿ ಕಾಡಾನೆ ಮಕ್ಕಳನ್ನು ಬೆನ್ನಟ್ಟಿಕೊಂಡು ಬಂದಿದ್ದ ಸಿದ್ಧನಕೊಡಿಗೆಗೆ ಬುಧವಾರ ಚಿಕ್ಕಅಗ್ರಹಾರ ವಲಯ ಅರಣ್ಯಾಧಿಕಾರಿ ಮಧುಕರ, ಉಪ ವಲಯ ಅರಣ್ಯಾಧಿಕಾರಿ ಬೀರೇಶ್, ಅರಣ್ಯ ರಕ್ಷಕ ನಾಗರಾಜ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತ ಮುಖಂಡ ಎಂ.ಎನ್.ನಾಗೇಶ್, ಗ್ರಾಮಸ್ಥರಾದ ಎಚ್.ಡಿ.ಲೋಕೇಶ್, ಶ್ರೀಹರ್ಷ, ಗುಡ್ಡೇಕೇರಿ ಸುಮಂತ, ಮನು, ಮಂಜುನಾಥ್, ವಿಕಾಸ, ಭವಾನಿ, ಭಾಗ್ಯಾ, ಗಾನವಿ, ಗೀತಾ, ಅಶ್ವಿನಿ ಇತರರಿದ್ದರು.