ಶೃಂಗೇರಿ ವಿದ್ಯಾಭಾರತಿ ಭವನದಲ್ಲಿ ಕೂಟ ಮಹಾಜಗತ್ತಿನ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ. ಸುಬ್ರಾಯ ವಿ. ಭಟ್ ಅವರನ್ನು ಗೌರವಿಸಲಾಯಿತು. ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ, ನಾಗರಾಜ್ ಇದ್ದರು.
ಶೃಂಗೇರಿ: ನಮ್ಮ ಆಚಾರ, ವಿಚಾರವನ್ನು ಪ್ರಾಮಾಣಿಕವಾಗಿ ಮಾಡಬೇಕು. ಲಾಫಲವನ್ನು ಭಗವಂತ ನಿರ್ಧರಿಸುತ್ತಾನೆ. ನಮ್ಮ ಧರ್ಮವನ್ನು ನಾವು ಪಾಲಿಸಬೇಕು ಎಂದು ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಭಾನುವಾರ ರಾಜಾನಗರದ ವಿದ್ಯಾಭಾರತಿ ಭವನದಲ್ಲಿ ಏರ್ಪಡಿಸಿದ್ದ ಕೂಟ ಮಹಾಜಗತ್ತಿನ ಸ್ಥಳೀಯ ಸಂಸ್ಥೆ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ನಾವು ಧರ್ಮಾಚರಣೆ ಮಾಡುವುದಲ್ಲದೆ ಇತರರಿಗೂ ಪ್ರೇರಣೆ ನೀಡಬೇಕು. ಬ್ರಾಹ್ಮಣನಾದವನು ಸಂಸ್ಕಾರದ ಮೂಲಕ ಬ್ರಾಹ್ಮಣ್ಯವನ್ನು ಕಾಪಾಡಬೇಕು. ಪ್ರತಿದಿನದ ನಿತ್ಯಕರ್ಮವನ್ನು ಚಾಚೂ ತಪ್ಪದೆ ನಡೆಸಬೇಕು. ಸಮಾಜದಲ್ಲಿ ಮುಂಚೂಣಿಯಲ್ಲಿದ್ದು ಸಮಾಜಕ್ಕೆ ಮಾದರಿಯಾಗಿರುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದರು.
ಪ್ರಾಣಿ ಹಾಗೂ ಮನುಷ್ಯನಿಗೆ ಜೀವನಶೈಲಿ ಒಂದೇ ಆಗಿದೆ. ಜೀವನದಲ್ಲಿ ಸಾರ್ಥಕತೆ ಪಡೆಯುವುದು ಮನುಷ್ಯನಿಗೆ ಮಾತ್ರ ಸಾಧ್ಯ. ನಮ್ಮ ಮನೆಯಲ್ಲಿ ನಡೆಯುವ ಸಮಾರಂಭದಲ್ಲಿ ಶಾಸದಲ್ಲಿ ಏನು ಹೇಳಿದರೂ ಅದನ್ನೇ ಪಾಲಿಸಬೇಕು. ಲೌಕಿಕವಾಗಿ ಜವಾಬ್ದಾರಿ ಇದ್ದರೂ ನಮ್ಮ ಧರ್ಮಾಚರಣೆಯನ್ನು ಕಡೆಗಣಿಸಬಾರದು ಎಂದು ತಿಳಿಸಿದರು.
ಮೆಣಸೆ ರಾಜೀವ್‌ಗಾಂಧಿ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಸುಬ್ರಾಯ ವಿ. ಭಟ್ ಮಾತನಾಡಿ, ಕೂಟ ಮಹಾ ಸಂಘಟನೆ ದೇವರಲ್ಲಿ ಗುರುವನ್ನು ಕಾಣುತ್ತಾನೆ. ಗುರುವಿನಲ್ಲೂ ದೇವರನ್ನು ಕಾಣುತ್ತಾರೆ. ದೇವರು, ಗುರು, ಆತ್ಮದಲ್ಲಿ ಯಾವುದೇ ಬೇಧವಿಲ್ಲ. ಶಂಕರಾಚಾರ್ಯರು ಧರ್ಮಸೂಕ್ಷ್ಮ ಅರಿತವರಾಗಿದ್ದು ಶಿಷ್ಯರ ಹಿತಕ್ಕಾಗಿ ಸ್ತೋತ್ರದ ಮೂಲಕ ಉಪದೇಶ ನೀಡಿದ್ದಾರೆ ಎಂದರು.
ಡಾ. ಸುಬ್ರಾಯ ವಿ.ಭಟ್, ಯೋಗ ಪಟು ಎಚ್.ಎಸ್.ಅರುಣ, ಡಾ.ರಾಘವೇಂದ್ರ ಹೊಳ್ಳ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೂಟ ಮಹಾಜಗತ್ತಿನಿಂದ ಶ್ರೀಮಠಕ್ಕೆ ಅನ್ನದಾನ ಸೇವೆಗಾಗಿ 1.75 ಲಕ್ಷ ರೂ. ದೇಣಿಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಘಟಕದ ಅಧ್ಯಕ್ಷ ಬಿ.ನಾಗರಾಜ್, ವಿದ್ವಾಂಸ ಡಾ. ಭಾನುಪ್ರಕಾಶ ಶರ್ಮ, ಕೂಟ ಮಹಾಜಗತ್ತಿನ ಪದಾಧಿಕಾರಿಗಳಾದ ರಘುನಾಥ ಸೋಮಾಯಾಜಿ, ಕೆ.ಎಸ್.ಕಾರಂತ, ರಾಘವೇಂದ್ರ ಮಯ್ಯ, ಟಿ.ಕೆ.ಪರಾಶರ, ವಿಶ್ವಜಿತ್, ರಾಜೇಂದ್ರ ಇದ್ದರು. ಜಗದ್ಗುರುಗಳಿಗೆ ಪೂರ್ಣಕುಂಭ ಸ್ವಾಗತ ಮಾಡಲಾಯಿತು. ಸಮಸ್ಟಿ ಭಿಕ್ಷಾ ಕಾಣಿಕೆ, ಭಿಕ್ಷಾ ವಂದನೆ, ವಸ ಕಾಣಿಕೆ, ಲಪುಷ್ಪ ಸಮರ್ಪಿಸಲಾಯಿತು