ಬೀರೂರಿನ ಶ್ರೀಹುಣಸೇಕಟ್ಟಮ್ಮ ದೇವಿಯ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಪ್ರವೇಶ ಮಹೋತ್ಸವ ವಿಜೃಭಣೆಯಿಂದ ನಡೆಯಿತು. 
ಚಿಕ್ಕಮಗಳೂರು

ಶ್ರೀ ಹುಣಸೇಕಟ್ಟಮ್ಮ ದೇವಿ ಪುನರ್ ಪ್ರತಿಷ್ಠಾಪನೆ

ಬೀರೂರು: ಬೀರೂರು ಸಮೀಪದ ಹಿರಿಯಂಗಳ ಗ್ರಾಮದ ಗದ್ದೆ ಬಯಲಿನ ಹುಣಸೇಕಟ್ಟಮ್ಮ ದೇವಿ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯದ ಪ್ರವೇಶ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು.
ಗುರುವಾರದಿಂದ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ಸಂಜೆ 4 ಗಂಟೆಯ ಗೋಧೂಳಿ ಲಗ್ನದಲ್ಲಿ ಮಂಗಳವಾದ್ಯಗೊಂದಿಗೆ ಗಂಗಾಪೂಜೆ, ತೀರ್ಥ ಸಂಗ್ರಹ, ಶ್ರೀಭೂತರಾಯಸ್ವಾಮಿ ಸಮೇತ ಪುರಪ್ರವೇಶ, ದೇವಾಲಯ ಪ್ರವೇಶಾಂಗ ಸಂಕಲ್ಪ, ದ್ವಾರಪಾಲಕ, ವಾಸ್ತುಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ರಕ್ಷಾಬಂಧನ, ಅಂಕುರಾರ್ಪಣೆ, ಋತ್ವಿಗ್ವರಣ, ನವಗ್ರಹ ಕಳಶರಾಧನೆ, ರಾಕ್ಷೋಘ್ಞ ಹೋಮ, ನಾಂದಿ, ದೇವತಾ ಹಾಗೂ ನವಗ್ರಹ ಸ್ಥಾಪನಾ ಪೂಜ, ಪಂಚಗವ್ಯ ಪ್ರಾಶನ, ಜಯಾದಿ, ಮಹಾಗಣಪತಿ ಹೋಮ, ನವಗ್ರಹ ವಾಸ್ತು ಹೋಮ ಪ್ರಾಯಶ್ಚಿತ್ತ ಹೋಮ, ಮಹಾಮಂಗಳಾರತಿ ನಡೆಯಿತು.
ಶುಕ್ರವಾರ ಬೆಳಗ್ಗೆ ವೃಷಭ ಲಗ್ನದಲ್ಲಿ ಶ್ರೀ ಹುಣಸೇಕಟ್ಟಮ್ಮ ದೇವಿಗೆ ಮಹಾಮಂಗಳಾರತಿ, ಪ್ರಾಣ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ಜಯಾಧಿ ಹೋಮ, ನೇತ್ರೋನ್ಮೀಲನ, ಕಾಳಿಬಿಂಬ ಪ್ರಧಾನ, ಕದಳೀ ಛೇದನ, ಕೂಷ್ಮಾಂಡ ಛೇದನ, ದರ್ಪಣ ಧಾರಣ ಅಷ್ಟದಿಕ್ಪಾಲಕರ ಪೂಜೆ, ಬಳಿಕ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಜರುಗಿತು.
ಗದ್ದೆ ಬಯಲಿನ ಗ್ರಾಮಸ್ಥರು, ಹಿರಿಯಂಗಳ ಗ್ರಾಮ, ಬೀರೂರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಮತ್ತು ಬಳಗಸ್ಥರು ಅಮ್ಮನವರಿಗೆ ಹಣ್ಣ ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. ದೇವಸ್ಥಾನ ಸಮಿತಿಯ ಪಿ.ಶಿವಮೂರ್ತಿ, ಮಂಜುನಾಥ, ಸಿ.ಎಸ್.ಕಂಡಿಹೊಳೆ ಕುಮಾರಣ್ಣ, ಸೋಮಣ್ಣ, ಉಮೇಶ್, ಮೋಹನ್ ಕುಮಾರ್, ಗ್ಯಾಸ್ ಮಲ್ಲಿಕಾರ್ಜುನ್, ಬಿ.ಎಂ.ಮಲಿಯಪ್ಪ, ಪುರಸಭೆ ಮಾಜಿ ಅಧ್ಯಕ್ಷೆ ಭಾಗ್ಯಲಕ್ಷ್ಮಿ ಹಾಗೂ ಸ್ಥಳೀಯ ಭಕ್ತರು ಇದ್ದರು.