ಪಂಚನಹಳ್ಳಿಯಲ್ಲಿ ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ಅವರನ್ನು ಸನ್ಮಾನಿಸಲಾಯಿತು. ಮಲ್ಲಿಕಾರ್ಜುನ್, ಉಮೇಶ್ ಬೆಳಗುಂಬ, ಪ್ರಭುಕುಮಾರ್, ನಾಗರಾಜ್ ಇದ್ದರು. 
ಚಿಕ್ಕಮಗಳೂರು

ಗೆಜ್ಜೆಕಲ್ಲಮ್ಮ ದೇವಿ ದರ್ಶನ ಪಡೆದ ರವಿ ಕೃಷ್ಣಾರೆಡ್ಡಿ (ravi krishna reddy)

ಪಂಚನಹಳ್ಳಿ: ಕೆಆರ್‌ಎಸ್ ಪಕ್ಷದ ಸಂಸ್ಥಾಪಕ ರವಿ ಕೃಷ್ಣರೆಡ್ಡಿ ಪಂಚನಹಳ್ಳಿ ಗ್ರಾಮದ ಗೆಜ್ಜೆ ಕಲ್ಲಮ್ಮ ದೇವಿಯ ದರ್ಶನ ಪಡೆದು ಗ್ರಾಮದ ಶಾಲೆ, ನಾಡಕಚೇರಿ, ಗ್ರಾಪಂ, ಸರ್ಕಾರಿ ಪ್ರೌಢಶಾಲೆ, ಆಸ್ಪತ್ರೆಗಳಿಗೆ ಭೇಟಿ ನೀಡಿದರು. ನಂತರ ಮಾತನಾಡಿದ ರವಿ ಕೃಷ್ಣರೆಡ್ಡಿ, ಈ ಗ್ರಾಮದ ಸಾರ್ವಜನಿಕರು ಪ್ರಜ್ಞಾವಂತರಿದ್ದು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದ್ದಾರೆ ಎಂದರು. ಎಲ್ಲ ಸರ್ಕಾರಿ ಕಚೇರಿಗಳಿಗೂ ಭೇಟಿ ನೀಡಿ ಆಡಳಿತವೈಖರಿ ಪರಿಶೀಲಿಸಿದರು. ಕೆಆರ್‌ಎಸ್ ಪಕ್ಷದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಪಿ.ಎಂ.ದಿನೇಶ್, ಉಮೇಶ್ ಬೆಳಗುಂಬ, ಪಕ್ಷದ ತಾಲೂಕು ಅಧ್ಯಕ್ಷ ಪ್ರಭುಕುಮಾರ್, ನಾಗರಾಜ್, ಆನಂದ ನಾಯಕ, ಜಯಣ್ಣ, ಸುನಿಲ್, ದೀಪಕ್, ಆನಂದ್, ಪ್ರದೀಪ್, ಕೊಟ್ರೇಶ್, ಮಂಜುನಾಥ್, ಚೇತನ್, ಅಭಿಷೇಕ್, ಲೋಕೇಶ್ ಇದ್ದರು.