ರಂಭಾಪುರಿ ಶ್ರೀ 
ಚಿಕ್ಕಮಗಳೂರು

ರಂಭಾಪುರಿ ಶ್ರೀಗಳ ಜೂನ್ ತಿಂಗಳ ಪ್ರವಾಸ

ಬಾಳೆಹೊನ್ನೂರು: ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಜೂನ್‌ನಲ್ಲಿ ರಾಜ್ಯದ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ ತಿಳಿಸಿದ್ದಾರೆ.
ಜೂ.6ರಂದು ಕುಂದಗೋಳ ತಾಲೂಕು ತರ್ಲಘಟ್ಟದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಗೋಪುರ ಕಳಸಾರೋಹಣ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. 7, 8ರಂದು ಹುಬ್ಬಳ್ಳಿ ತಾಲೂಕಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. 
10ರಂದು ಶಿವಮೊಗ್ಗ ಜಿಲ್ಲೆ ಸೂಗೂರಿನಲ್ಲಿ ಶ್ರೀ ಪಟ್ಟದಬಸವೇಶ್ವರ ಮಂಡಲ ಪೂಜಾ ಧರ್ಮ ಸಮಾರಂಭ, 11ರಂದು ಭದ್ರಾವತಿ ತಾಲೂಕು ಎಡೇಹಳ್ಳಿಯಲ್ಲಿ ಇಷ್ಟಲಿಂಗ ಮಹಾಪೂಜೆ, ಸಭೆ ನಡೆಸುವರು. 14, 15ರಂದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಶ್ರೀ ಕಾಶಿ ಜಗದ್ಗುರುಗಳ ಅಧಿಕ ಮಾಸದ ಪೂಜಾನುಷ್ಠಾನ ಮಂಗಲ ಸಮಾರಂಭ, 21ರಂದು ಕೊರಟಗೆರೆ ತಾಲೂಕು ಸಿದ್ಧರಬೆಟ್ಟ ಕ್ಷೇತ್ರದಲ್ಲಿ ಧರ್ಮ ಜಾಗೃತಿ ಸಮಾರಂಭ, 23ರಂದು ಗುಬ್ಬಿ ತಾಲೂಕು ನಿಟ್ಟೂರಿನಲ್ಲಿ ಇಷ್ಟಲಿಂಗ ಮಹಾಪೂಜೆ, 27ರಂದು ರಾಮನಗರ ಜಿಲ್ಲೆ ಅವ್ವೇರಹಳ್ಳಿ ರೇವಣಸಿದ್ಧೇಶ್ವರ ಬೆಟ್ಟದಲ್ಲಿ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು. 29ರಂದು ಪೌರ್ಣಿಮೆಯ ಅಂಗವಾಗಿ ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ವಾಸ್ತವ್ಯ ಇದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.