ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಡಾ. ಕೆ.ಪಿ.ಅಂಶುಮಂತ್, ಕೆ.ಪಿ.ಪ್ರಸನ್ನ, ಸಿ.ಎಲ್.ಮನೋಹರ್, ಯೋಗೀಶ ರಾವ್, ಎಲ್.ಎಂ.ಸತೀಶ್ ಇತರರಿದ್ದರು.
- ಭದ್ರಾ ಕಾಡಾ ಅಧ್ಯಕ್ಷ
- ಶಾಂತಿಯ ತೋಟದ
ಎನ್.ಆರ್.ಪುರ: ಮುತ್ತಿನಕೊಪ್ಪದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾರಂಭವಾಗಲು ಎಚ್.ಟಿ.ರಾಜೇಂದ್ರ ಕಾರಣರಾಗಿದ್ದರು ಎಂದು ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ತಿಳಿಸಿದರು.
ಮುತ್ತಿನಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ತಾಲೂಕು ಒಕ್ಕಲಿಗರ ಸಂಘದ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಚಿಂತಕ ಎಚ್.ಟಿ.ರಾಜೇಂದ್ರ ಅವರ ಪ್ರಥಮ ವರ್ಷದ ಸ್ಮರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಚ್.ಟಿ.ರಾಜೇಂದ್ರ ಮುತ್ತಿನಕೊಪ್ಪ ಮಂಡಲ ಪ್ರಧಾನರಾಗಿ ರಾಜಕೀಯ ಪ್ರವೇಶ ಮಾಡಿದ್ದರು. ಜಾತ್ಯತೀತ ನಿಲುವು ಹೊಂದಿದ್ದರು. ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟದ ಮಾತನ್ನು ಎಲ್ಲರೂ ಅನುಸರಿಸಬೇಕು ಎಂಬುದು ಅವರ ತುಡಿತವಾಗಿತ್ತು ಎಂದರು.
ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಕೆ.ಪಿ.ಪ್ರಸನ್ನ ಮಾತನಾಡಿ, ರಾಜೇಂದ್ರ ಅವರ ಹೆಸರಿನಲ್ಲಿ ನೆಟ್ಟ ಗಿಡಗಳು ಹೆಮ್ಮರವಾಗಿ ಬೆಳೆದು ಪ್ರತಿಯೊಬ್ಬರಿಗೂ ಆಶ್ರಯ ನೀಡುವಂತಾಗಲಿ ಎಂದು ಆಶಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎಲ್.ಮನೋಹರ್ ಮಾತನಾಡಿ, ಎಚ್.ಟಿ.ರಾಜೇಂದ್ರ ಪ್ರಬುದ್ಧ ರಾಜಕಾರಣಿಯಾಗಿದ್ದರು. ಅವರ ಬದುಕು ಯುವಜನರಿಗೆ ಮಾದರಿಯಾಗಲಿ ಎಂದು ತಿಳಿಸಿದರು.
ಕಾಲೇಜು ಆವರಣದಲ್ಲಿ ಸಂಪಿಗೆ, ಮಾವು, ನೇರಳೆ ಗಿಡಗಳನ್ನು ನೆಡಲಾಯಿತು. ಮುತ್ತಿನಕೊಪ್ಪ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಯೋಗೀಶ್ ರಾವ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಮುಖಂಡರಾದ ಡಿ.ಸಿ.ದಿವಾಕರ, ಎಸ್.ಎಸ್.ಶಾಂತಕುಮಾರ್, ಗೇರ್‌ಬೈಲು ನಟರಾಜ, ಬಿ.ಎಸ್.ಸುಬ್ರಹ್ಮಣ್ಯ, ಎನ್.ಎಸ್.ನರೇಂದ್ರ, ಕೆ.ಎನ್.ಲೋಕೇಶ್, ಇ.ಸಿ.ಜೋಯಿ, ಪಯಾಜ್, ಮುತ್ತಿನಕೊಪ್ಪ ವೃತ್ತದ ವಲಯ ಅರಣ್ಯಾಧಿಕಾರಿ ಅರುಣ್‌ಕುಮಾರ್ ಇತರರಿದ್ದರು.