ಬೀರೂರಿನ ಪಿಎಂ ಶ್ರೀ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನೂತನ ತರಗತಿ ಕೊಠಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿತು. ಗಿರೀಶ್ ದೇವರಮನೆ, ಬಿ.ಎನ್.ಪ್ರಸನ್ನ ಕುಮಾರ್, ಅನುಸೂಯ ಇತರರು ಇದ್ದರು.
ಬೀರೂರು: ಪಿಎಂ ಶ್ರೀ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ದಾನಿಗಳು ಹಾಗೂ ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಸಹಯೋಗದಲ್ಲಿ ಹೊಸ ಶಾಲಾ ತರಗತಿ ಕೊಠಡಿ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಹಿರಿಯ ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷ ದೇವರ ಮನೆ ಗಿರೀಶ್ ಮಾತನಾಡಿ, ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಹಿನ್ನೆಲೆಯಲ್ಲಿ ಇಂದು ದಾಖಲಾತಿಯಲ್ಲಿ ಗಣನೀಯ ಹೆಚ್ಚಳವಾಗಿದೆ. ಸುಸಜ್ಜಿತ ಕೊಠಡಿಗಳು ವಿದ್ಯಾರ್ಥಿ ಹಾಗೂ ಪಾಲಕರ ಗಮನ ಸೆಳೆಯುತ್ತದೆ. ಆದ್ದರಿಂದ ಶಾಲೆಗಳು ಅಭಿವೃದ್ಧಿ ಕಾಣಬೇಕಾದರೆ ಶಾಲೆಯು ಸುಸಜ್ಜಿತ ಕೊಠಡಿ, ಮೈದಾನ, ಶಿಕ್ಷಕರು ಮತ್ತು ಉತ್ತಮ ಪರಿಸರ ಮುಖ್ಯವಾಗಿರುತ್ತದೆ. ಇಂದು ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ಕೊಠಡಿ ನಿರ್ಮಿಸಲಾಗುತ್ತಿದೆ ಎಂದರು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಬಿ.ಎನ್.ಪ್ರಸನ್ನ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳು ಎಂದರೆ ಮುಖ ತಿರುಗಿಸುವವರು ಹೆಚ್ಚು. ಆದರೆ ಯಾವ ಕ್ರಮ ಕೈಗೊಂಡರೆ ಶಾಲೆ ಅಭಿವೃದ್ಧಿಯಾಗುತ್ತದೆ ಎಂದು ನಿರ್ಧರಿಸುವಲ್ಲಿ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನ, ಶಿಕ್ಷಕರ ಸಹಕಾರ ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳನ್ನು ದಾಖಲು ಮಾಡುವುದರಿಂದ ಹಿಡಿದು ಶಾಲೆಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ಹಿರಿಯ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶಾಲೆಯಲ್ಲಿರುವ ಕೊಠಡಿ ಕೊರತೆ ನೀಗಿಸಲು ದಾನಿಗಳ ಸಹಕಾರ ಪಡೆದು ಕೊಠಡಿ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.
ಗೌರವ ಅಧ್ಯಕ್ಷ ವೆಂಕಟೇಶ್, ಎಸ್‌ಡಿಎಂಸಿ ಸದಸ್ಯರಾದ ರೋಹಿಣಿ, ಶ್ರೀಧರ್, ಮಂಜುಳಾ, ಚಿರಾಗ್ ಮೆಹತಾ, ನಿವೃತ್ತ ಶಿಕ್ಷಕರಾದ ಪಂಚಾಕ್ಷರಯ್ಯ, ಮತ್ತು ಶಾಲೆ ಸಹ ಶಿಕ್ಷಕರಾದ ತಿಪ್ಪೇಶ್, ಉಮೇಶ್, ಚಂದ್ರಶೇಖರ್, ಉಪಸ್ಥಿತರಿದ್ದರು.