ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದುಕೊರತೆ ಸಭೆ ನಡೆಯಿತು. ಗುರುದತ್ ಕಾಮತ್, ಡಿ.ಇ.ನೂತನ್, ಡಿ.ರಾಮು, ಆಶಾ ಮಧು, ಪವಿತ್ರಾ ದೇವರಾಜ್, ಪಿಕಪ್ ಚಂದ್ರು, ಮಂಜುನಾಥ್, ವಿಜಯಲಕ್ಷ್ಮೀ ಮತ್ತಿತರರಿದ್ದರು. 
ಚಿಕ್ಕಮಗಳೂರು

ದಲಿತರಿಗೆ ನ್ಯಾಯ ಒದಗಿಸಿ

ಎನ್.ಆರ್.ಪುರ: ದಲಿತ ಕುಟುಂಬದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಸಭೆ ನಡೆಸಬೇಕು ಎಂದು ದಲಿತ ಮುಖಂಡರು ಒತ್ತಾಯಿಸಿದರು.
ಭಾನುವಾರ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ದಲಿತರ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರು ಮಾತನಾಡಿ, ಕುಂದುಕೊರತೆ ಸಭೆ ನಡೆಸುವ ಮುನ್ನ ದಲಿತ ಮುಖಂಡರಿಗೆ ತಿಳಿಸಬೇಕು. ಗ್ರಾಮಗಳಿಗೆ ಅಧಿಕಾರಿಗಳು ತೆರಳಿ ಸಭೆ ನಡೆಸಬೇಕು. ಎಸ್.ಸಿ., ಎಸ್ಟಿ ಪ್ರಕರಣ ದಾಖಲಿಸುವಾಗ ಮಧ್ಯವರ್ತಿಗಳಿಗೆ ಅವಕಾಶ ನೀಡದೆ ಅರ್ಹರಿಗೆ ನ್ಯಾಯ ಒದಗಿಸಬೇಕು. ಪಟ್ಟಣದ ಅಂಬೇಡ್ಕರ್ ಭವನಕ್ಕೆ ಬೀಗ ಹಾಕಬೇಕಲ್ಲದೆ ಭದ್ರತೆ ನೀಡಬೇಕು. ಹೊನ್ನೇಕುಡಿಗೆ ಸಂಪರ್ಕ ಕಲ್ಪಿಸುವ ಸಿದ್ದರಾಮಯ್ಯ ಸೇತುವೆ ಬಳಿ ಕೆಲವರು ಮದ್ಯಪಾನ ಮಾಡುತ್ತಿದ್ದು ಸೇತುವೆ ಸಮೀಪ ಮದ್ಯದ ಬಾಟಲಿ, ಕಸದ ರಾಶಿಗಳನ್ನು ಹಾಕಲಾಗುತ್ತಿದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಿಪಿಐ ಗುರುದತ್ ಕಾಮತ್ ಮಾತನಾಡಿ, ಸಭೆಯಲ್ಲಿ ದಲಿತ ಮುಖಂಡರು ತಿಳಿಸಿರುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ಸಭೆಯಲ್ಲಿ ಪಿಎಸ್‌ಐ ಡಿ.ನೂತನ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಡಿ.ರಾಮು, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ದೇವರಾಜ್, ಪಿಕಪ್ ಚಂದ್ರು, ಆಶಾ ಮಧು, ಮಂಜುನಾಥ್, ವಿಜಯಲಕ್ಷ್ಮೀ, ಶ್ರೀನಾಥ್, ಮಂಜು ಮತ್ತಿತರರಿದ್ದರು.