ಕೆ.ಬಿದರೆ ಎ.ಸಿ.ಚಂದ್ರೇಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ ನೂತನ ಶೌಚಗೃಹ ಉದ್ಘಾಟಿಸಲಾಯಿತು. ಟಿ.ಕೆ.ಜಗದೀಶ್, ಎ.ಸಿ. ನಿರಂಜನ್, ಪ್ರದೀಪ್ ಇತರರಿದ್ದರು. 
ಚಿಕ್ಕಮಗಳೂರು

ಶಾಲೆಗೆ ಮೂಲ ಸೌಕರ್ಯ ಒದಗಿಸಿ

ಜಿ. ಗಜೇಂದ್ರ
ಪಂಚನಹಳ್ಳಿ: ಶಾಲೆಯಲ್ಲಿ ಸಮರ್ಪಕ ಮೂಲ ಸೌಕರ್ಯಗಳನ್ನು ಒದಗಿಸಿದರೆ ಮಾತ್ರ ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದು ಹಾಸನ ಹಾಲು ಒಕ್ಕೂಟದ ನಿರ್ದೇಶಕ ಟಿ.ಕೆ.ಜಗದೀಶ್ ತಿಳಿಸಿದರು.
 ಕೆ.ಬಿದರೆ ಗ್ರಾಮದ ಎ.ಸಿ.ಚಂದ್ರೇಗೌಡ ಸ್ಮಾರಕ ಪ್ರೌಢಶಾಲೆಯಲ್ಲಿ ನೂತನವಾಗಿ ನಿರ್ಮಿಸಿದ ಹೆಣ್ಣು ಮಕ್ಕಳ ಶೌಚಗೃಹ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ನಿರ್ಮಾಣಕ್ಕೆ ಲೈಫ್‌ಲೈನ್ ಫಿಡ್ಸ್  ಕಂಪನಿ ಮಾಲೀಕ ಕೆ.ಕಿಶೋರ್‌ಕುಮಾರ್ ಹೆಗ್ಡೆ ಸಂಪೂರ್ಣ ವೆಚ್ಚ ಭರಿಸಿದ್ದು ಶಾಲೆಯ ಆಡಳಿತ ಮಂಡಳಿ ಇವರ ಕಾರ್ಯಕ್ಕೆ ಶ್ಲಾಘಿಸಿದೆ. ಇವರು ಶಿಕ್ಷಣದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು ಶಿಕ್ಷಣ ಪ್ರೇಮಿ ಎಂದರು. ಸಂಸ್ಥೆ ಕಾರ್ಯದರ್ಶಿ ಎ.ಸಿ.ನಿರಂಜನ್, ಸದಸ್ಯರಾದ ಎ.ಎನ್.ಚಂದನ್, ಟಿ.ಆರ್.ಮರುಳಸಿದ್ದಪ್ಪ, ಮುಖ್ಯಶಿಕ್ಷಕ ಪ್ರದೀಪ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಸದಸ್ಯರು, ಶಾಲಾ ಸಿಬ್ಬಂದಿ ಇದ್ದರು.