ಮೂಡಿಗೆರೆ ಎಂಇಎಸ್ ಶಾಲೆ ವಾರ್ಷಿಕೋತ್ಸವವನ್ನು ಸಾಹಿತಿ ಚಟ್ನಳ್ಳಿ ಮಹೇಶ್ ಉದ್ಘಾಟಿಸಿದರು. ಚಿಂತು, ಹರೀಶ್, ವಿ.ವೆಂಕಟೇಶ್ವರರಾವ್ ಇತರರಿದ್ದರು.
ಮೂಡಿಗೆರೆ: ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೆ ಪಠ್ಯದ ಜತೆಗೆ ನಿಸರ್ಗಮುಖಿ ಹಾಗೂ ಜನಮುಖಿ ಶಿಕ್ಷಣ ದೊರೆಯಬೇಕೆಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು. ಎಂಇಎಸ್ ಶಾಲೆ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮೊಬೈಲ್‌ನಿಂದ ಮಕ್ಕಳು ಬೌದ್ಧಿಕವಾಗಿ ಹಿಂದುಳಿಯುವ ಜತೆಗೆ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಹಾಗಾಗಿ ಮಕ್ಕಳಿಂದ ಮೊಬೈಲ್ ಕಡ್ಡಾಯವಾಗಿ ದೂರವಿಡಬೇಕು. ಮಕ್ಕಳೆಂದರೆ ಸುಂದರ ಪುಷ್ಪವಿದ್ದಂತೆ. ಅದರಲ್ಲಿರುವ ಅಂತರ ಸತ್ವವನ್ನು ಪಾಲಕರು ಹಾಗೂ ಶಿಕ್ಷಕರು ಹೊರ ತೆಗೆಯಬೇಕೆಂದು ಸಲಹೆ ನೀಡಿದರು.
ಹಾಸ್ಯ ಕಲಾವಿದೆ ನಯನಾ ಮಾತನಾಡಿ, ಕನ್ನಡ ಭಾಷೆಗೆ ಹೆಚ್ಚು ಮಹತ್ವ ನೀಡುವ ಜತೆಗೆ ಎಲ್ಲ ಭಾಷೆಯನ್ನೂ ಪ್ರೀತಿಸಬೇಕು. ಮಕ್ಕಳು ಎಲ್ಲ ವಿಚಾರಗಳ ಬಗ್ಗೆ ಪಾಲಕರಲ್ಲಿ ಮುಕ್ತವಾಗಿ ಹೇಳಿಕೊಳ್ಳಬೇಕು. ಹಿರಿಯರಿಗೆ ಗೌರವ ನೀಡಬೇಕು ಎಂದು ಹೇಳಿದರು. ಹಾಸ್ಯದ ಮೂಲಕ ಸಭಿಕರನ್ನು ರಂಜಿಸಿದರು. ಎಂಇಎಸ್ ಶಾಲೆ ಪ್ರಾಚಾರ್ಯೆ ಚಿಂತು, ಹರೀಶ್ ಪಿಯು ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಹರೀಶ್, ಪ್ರಾಚಾರ್ಯ ವಿ.ವೆಂಕಟೇಶ್ವರರಾವ್ ಇತರರಿದ್ದರು.