ಬಣಕಲ್‌ನಲ್ಲಿ ಹೋಬಳಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಬಿ.ಬಿ.ನಿಂಗಯ್ಯ, ಸುರೇಂದ್ರ, ವಿನಯ್ ಇತರರಿದ್ದರು.
- ಮರುನೇಮಕಕ್ಕೆ ನಿರ್ಣಯ
- ಒಗ್ಗಟ್ಟಿನಿಂದ ಕೆಲಸ ಮಾಡಿದರೆ
ಬಣಕಲ್: ಕಾಂಗ್ರೆಸ್ ನಿಜವಾದ ಶಕ್ತಿ ಕಾರ್ಯಕರ್ತರೇ ಆಗಿದ್ದಾರೆ. ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಪಕ್ಷ ಸಂಘಟನೆಗೆ ಶ್ರಮಿಸಬೇಕು ಎಂದು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹೇಳಿದರು.
ಬಣಕಲ್ ಹೋಬಳಿ ಕಾಂಗ್ರೆಸ್‌ನಿಂದ ಬಣಕಲ್‌ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಮುಂಬರುವ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳನ್ನು ಸಂಘಟಿತವಾಗಿ ಎದುರಿಸಿ ಕಾಂಗ್ರೆಸ್ ಗೆಲುವಿಗೆ ಎಲ್ಲ ಕಾರ್ಯಕರ್ತರೂ ಶ್ರಮಿಸಬೇಕು. ರಾಜ್ಯ ಸರ್ಕಾರದ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ ಎಂದರು.
ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಬಣಕಲ್ ಹೋಬಳಿಯಲ್ಲಿ ಕಾಂಗ್ರೆಸನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದ್ದು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮುಂಬರುವ ಚುನಾವಣೆಗಳಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿರುವ ಜಯರಾಮ್ ಗೌಡ ಅವರನ್ನು ಮರುನೇಮಕ ಮಾಡಬೇಕು ಹಾಗೂ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಅವರನ್ನು ಮುಂದುವರಿಸಬೇಕು ಎಂಬ ಒಮ್ಮತದ ನಿರ್ಣಯವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಗೌಡ, ಹಿರಿಯ ಮುಖಂಡ ಎಂ.ಪಿ.ಮನುಗೌಡ, ಕೆಂಜಿಗೆ ವಿನಯ್ ಗೌಡ, ಅಲ್ಪಸಂಖ್ಯಾತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇರ್ಫಾನ್, ವಿನಯ್‌ಕುಮಾರ್, ಎಂ.ಎಸ್.ಅನಂತ, ಬಿ.ಎ.ಉಮರ್, ಸಿ.ಕೆ.ಇಬ್ರಾಹಿಂ, ಕುಂದೂರು ಸುಂದರೇಶ್ ಗೌಡ, ಹೊಸಳ್ಳಿ ಮಾಧವ್ ಗೌಡ, ಹೊಸಳ್ಳಿ ಚಂದ್ರೇಗೌಡ, ಚಕ್ಕಮಕ್ಕಿ ಎ.ಸಿ.ಅಯೂಬ್, ತರುವೆ ರಾಮಚಂದ್ರ ಗೌಡ, ಕೊಟ್ಟಿಗೆಹಾರ ಅಜೀಜ್, ದಿಲ್ದಾರ್ ಬೇಗಂ, ಮರುಗುಂದ ಪ್ರಸನ್ನ, ತರುವೆ ಗ್ರಾಪಂ ಅಧ್ಯಕ್ಷ ರಘು, ವಿವಿಧ ಗ್ರಾಪಂಗಳ ಅಧ್ಯಕ್ಷರು, ಸದಸ್ಯರು, ಮಾಜಿ ಅಧ್ಯಕ್ಷರು, ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಇದ್ದರು.