ಚಿಕ್ಕಮಗಳೂರಿನ ಡಾ.ಮಂಜುಳಾ ಹುಲ್ಲಹಳ್ಳಿ ಅವರ ನಿವಾಸಕ್ಕೆ ಆಗಮಿಸಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಪದಾಧಿಕಾರಿಗಳು ಜಿಲ್ಲಾ ಪ್ರಥಮ ಜಾನಪದ ಮಹಿಳಾ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಆಗಮಿಸಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಅಧಿಕೃತ ಆಹ್ವಾನ ನೀಡಿದರು. ಎಂ.ಎಸ್.ವಿಶಾಲಾಕ್ಷಮ್ಮ, ಕವಿತಾ ಕೇಶವ, ಬಿ.ಕೆ. ಪುಷ್ಪ ಮತ್ತಿತರರಿದ್ದರು.
- ಅಜ್ಜಂಪುರದಲ್ಲಿ ಜೂ. ೩೦ರಂದು ನಡೆಯಲಿರುವ ಜಿಲ್ಲಾ ಪ್ರಥಮ ಜಾನಪದ ಮಹಿಳಾ ಸಮ್ಮೇಳನ
- ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ಉಪನಿರ್ದೇಶಕಿ, ಸಾಹಿತಿ ಡಾ. ಮಂಜುಳಾ ಹುಲ್ಲಹಳ್ಳಿ
ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರದಲ್ಲಿ ಜೂ. ೩೦ರಂದು ನಡೆಯಲಿರುವ ಜಿಲ್ಲಾ ಪ್ರಥಮ ಜಾನಪದ ಮಹಿಳಾ ಸಮ್ಮೇಳನದ ಸಮ್ಮೇಳನಾಧ್ಯಕ್ಷೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ಉಪನಿರ್ದೇಶಕಿ, ಸಾಹಿತಿ ಡಾ. ಮಂಜುಳಾ ಹುಲ್ಲಹಳ್ಳಿ ಅವರಿಗೆ ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕ ಗುರುವಾರ ಅಧಿಕೃತ ಆಹ್ವಾನ ನೀಡಿತು.
ಅಜ್ಜಂಪುರದಿAದ ಬೆಳಗ್ಗೆ ಮಂಜುಳಾ ಹುಲ್ಲಹಳ್ಳಿ ಅವರ ಚಿಕ್ಕಮಗಳೂರಿನ ನಿವಾಸಕ್ಕೆ ಆಗಮಿಸಿದ ಪದಾಧಿಕಾರಿಗಳು ಮಂಜುಳಾ ಅವರನ್ನು ಸನ್ಮಾನಿಸಿ, ಫಲ ತಾಂಬೂಲ ನೀಡಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ, ಜಿಲ್ಲೆ ಕಂಡ ಅಪರೂಪದ ಸಾಹಿತಿ, ಲೇಖಕಿ ಮತ್ತು ಸಂಶೋಧಕಿ ಡಾ. ಮಂಜುಳಾ ಹುಲ್ಲಹಳ್ಳಿ ಅವರನ್ನು ಪ್ರಥಮ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ತಮಗೆ ಅತ್ಯಂತ ಸಂತಸ, ಹೆಮ್ಮೆ ಮತ್ತು ಸಾರ್ಥಕತೆ ತಂದಿದೆ ಎಂದರು.
ಅಜ್ಜAಪುರದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜೂ. ೩೦ರಂದು ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲಾಗುವುದು. ಸಮ್ಮೇಳನಾಧ್ಯಕ್ಷರನ್ನು ವಿವಿಧ ಜಾನಪದ ಕಲಾತಂಡಗಳ ನಡುವೆ ಸಾರೋಟಿನಲ್ಲಿ ಮೆರವಣಿಗೆ ಮುಖಾಂತರ ವೇದಿಕೆಗೆ ಕರೆ ತರಲಾಗುವುದು ಎಂದು ತಿಳಿಸಿದರು.
ಅಂದು ಬೆಳಗಿನಿಂದ ಸಂಜೆವರೆಗೆ ವಿವಿಧ ಗೋಷ್ಠಿಗಳನ್ನು ನಡೆಸಲಾಗುವುದು. ನಾಡಿನ ಹಿರಿಯ ಜಾನಪದ ಕಲಾವಿದರನ್ನು, ಸಾಹಿತಿಗಳನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು. ಜಿಲ್ಲೆಯ ಕಲಾವಿದರಿಗೆ ಜಾನಪದ ಕಲೆಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷೆ ಕವಿತಾ ಕೇಶವ ಮಾತನಾಡಿ, ಸಮ್ಮೇಳನದಲ್ಲಿ ೫೦ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಿದ್ದು ಸಮ್ಮೇಳನದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಾಹಿತಿ ಡಾ. ಮಂಜುಳಾ ಹುಲ್ಲಹಳ್ಳಿ, ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾಮಟ್ಟದ ಮಹಿಳಾ ಸಮ್ಮೇಳನವನ್ನು ನಡೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯವಾಗಿದೆ ಎಂದರು.
ಸಮ್ಮೇಳನಾಧ್ಯಕ್ಷರನ್ನಾಗಿ ತಮ್ಮನ್ನು ಆಯ್ಕೆ ಮಾಡಿರುವುದು ತಮಗೆ ಹೆಮ್ಮೆ ಮತ್ತು ಸಾರ್ಥಕತೆಯನ್ನು ತಂದಿದೆ. ಇನ್ನಷ್ಟು ಸಾಧಿಸುವ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.
ಸಾಹಿತಿ, ಸಂಶೋಧಕಿ ಮತ್ತು ಲೇಖಕಿಯಾಗಿ ಜಿಲ್ಲೆಯಲ್ಲಿನ ತಮ್ಮ ಅನುಭವವನ್ನು ಹಂಚಿಕೊAಡ ಅವರು ಚಿಕ್ಕಮಗಳೂರು ಜಿಲ್ಲೆ ಜ್ಞಾನ, ಸಂಸ್ಕÈತಿ ಮತ್ತು ಪರಂಪರೆಯ ಆಗರವಾಗಿದೆ. ಇಲ್ಲಿ ಹುಡುಕಿದಷ್ಟೂ, ಬರೆದಷ್ಟೂ ಹೊಸ ಹೊಸ ವಿಷಯಗಳು ಲಭ್ಯವಾಗುತ್ತವೆ ಎಂದರು.
ತಾಲೂಕು ಅಧ್ಯಕ್ಷೆ ಬಿ.ಕೆ. ಪುಷ್ಪ ಮಾತನಾಡಿದರು. ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಜಿಲ್ಲಾ ಗೌರವಾಧ್ಯಕ್ಷೆ ಶಾಂತಾ ಗುರುಮೂರ್ತಿ, ಪದಾಧಿಕಾರಿಗಳಾದ ವಿಜಯಕುಮಾರಿ, ರಂಜಿತ, ಮಧು, ಪುಟ್ಟಮ್ಮ, ಬಸಮ್ಮ, ಮಂಜುಳ, ಪುಣ್ಯವತಿ, ಪ್ರೇಮ, ಮಹಾದೇವಿ ಉಪಸ್ಥಿತರಿದ್ದರು.