ಕಡೂರು ರೋಟರಿ ಕ್ಲಬ್‌ನಿಂದ ಪತ್ರಕರ್ತರಾದ ಎ.ಜೆ.ಪ್ರಕಾಶ್‌ಮೂರ್ತಿ, ಎಚ್.ಆರ್.ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಆರ್.ಜೆ.ಕೃಷ್ಣಸ್ವಾಮಿ, ಗೋಪಾಲಕೃಷ್ಣ, ಶಿವಕುಮಾರ್, ಹರೀಶ್, ಮಂಜುನಾಥ್ ಇತರರಿದ್ದರು.
- ಇಬ್ಬರು ಪತ್ರಕರ್ತರನ್ನು
- ಸಮಾಜಮುಖಿ ಕಾರ್ಯಗಳಿಗೆ
ಕಡೂರು: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರ ಪ್ರಮುಖವಾದದ್ದು ಎಂದು ರೋಟರಿ ಕ್ಲಬ್ ಅಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ ಹೇಳಿದರು.
ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದುವ, ಸರ್ಕಾರದ ನಾಲ್ಕನೇ ಆಧಾರಸ್ತಂಭವಾಗಿ ಮಾಧ್ಯಮ ಕಾರ್ಯನಿರ್ವಹಿಸುತ್ತಿದೆ. ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಮಾಧ್ಯಮದ ಪ್ರೋತ್ಸಾಹ ಅಗತ್ಯ. ಈ ನಿಟ್ಟಿನಲ್ಲಿ ರೋಟರಿಯಿಂದ ಇಬ್ಬರು ಪತ್ರಕರ್ತರನ್ನು ಗೌರವಿಸಲಾಗುತ್ತಿದೆ ಎಂದರು.
ವಕೀಲ ಟಿ.ಗೋವಿಂದಸ್ವಾಮಿ ಕಾನೂನು ಪಾತ್ರಗಳ ಕುರಿತು ಮಾತನಾಡಿ, ನಾವೆಲ್ಲರೂ ನಮ್ಮ ನೆಲದ ಕಾನೂನನ್ನು ಗೌರವಿಸಬೇಕು ಎಂದರು.
ಹಿರಿಯ ಪತ್ರಕರ್ತ ಎ.ಜೆ.ಪ್ರಕಾಶ್‌ಮೂರ್ತಿ ಮಾತನಾಡಿ, ಪತ್ರಿಕೆಗಳನ್ನು ಬೆಳೆಸುವುದು ಓದುಗರ ಕೈಯಲ್ಲಿದೆ. ಈ ಹಿಂದೆ ಪತ್ರಿಕೆಗಳೇ ಮುಖ್ಯವಾಹಿನಿಯಲ್ಲಿದ್ದವು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಕ್ಷಣಮಾತ್ರದ ಸುದ್ದಿಗಳು ಪ್ರಚಲಿತವಾಗುತ್ತಿವೆ. ವಸ್ತುನಿಷ್ಠ ವರದಿಗಳಿಗೆ ಹೆಚ್ಚು ಮನ್ನಣೆ ನೀಡಿ ಪತ್ರಿಕೆಗಳ ಬೆಳವಣಿಗೆಗೆ ಎಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂದರು.
ಪತ್ರಕರ್ತರಾದ ಎ.ಜೆ.ಪ್ರಕಾಶ್‌ಮೂರ್ತಿ ಮತ್ತು ಎಚ್.ಆರ್.ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಹಿರಿಯ ವಕೀಲ ಬಿ.ಶಿವಕುಮಾರ್, ಕಾರ್ಯದರ್ಶಿ ಗೋಪಾಲಕೃಷ್ಣ, ಅಣ್ಣಪ್ಪ, ಕೆ.ಎಚ್.ಮಂಜುನಾಥ್, ಎಚ್.ಬಿ.ಹರೀಶ್, ವಡೇರಹಳ್ಳಿ ಅಶೋಕ್, ಸೂರಿ ಶ್ರೀನಿವಾಸ್, ಟಿ.ಡಿ.ರಾಜನ್, ಮಂಜುನಾಥ್, ಶ್ರೀನಿವಾಸ್ ಇತರರಿದ್ದರು.