ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಮಹೋತ್ಸವದ ಮಂಟಪ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಿ.ಚನ್ನಕೇಶವ, ಆರ್.ಡಿ.ಮಹೇಂದ್ರ, ಭಾಸ್ಕರ್ ವೆನಿಲ್ಲಾ, ಡಿ.ಎನ್.ಸುಧಾಕರ್, ಉಪೇಂದ್ರ, ಬಿ.ಗಿರೀಶ್ ಇತರರಿದ್ದರು. 
ಚಿಕ್ಕಮಗಳೂರು

ದುರ್ಗಾ ಮಂಟಪ ನಿರ್ಮಾಣಕ್ಕೆ ಚಾಲನೆ Durga Mantapa flagged off

ಬಾಳೆಹೊನ್ನೂರು: ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಪಟ್ಟಣದ ಶ್ರೀ ಮಾರ್ಕಾಂಡೇಶ್ವರ ದೇವಸ್ಥಾನದ ಆವರಣದಲ್ಲಿ ಅ.11ರಿಂದ 21ರವರೆಗೆ ನಡೆಯಲಿರುವ ನವರಾತ್ರಿ ಪೂಜಾ ಮಹೋತ್ಸವದ ದುರ್ಗಾ ಮಂಟಪ ನಿರ್ಮಾಣಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಲಾಯಿತು.

ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಸುದ್ದಿಗಾರರೊಂದಿಗೆ ಮಾತನಾಡಿ, ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ 17ನೇ ವರ್ಷದ ಶ್ರೀ ದುರ್ಗಾದೇವಿ ಉತ್ಸವ ಅ.11ರಿಂದ ಅ.21ರವರೆಗೆ ಸಡಗರದಿಂದ ನಡೆಯಲಿದೆ. ಮಹೋತ್ಸವಕ್ಕೆ ಸಿದ್ಧತೆ ಆರಂಭಿಸಿದ್ದು, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೃಹತ್ ದುರ್ಗಾ ಮಂಟಪ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.

ಸಮಿತಿ ಕಾರ್ಯಾಧ್ಯಕ್ಷ ಬಿ.ಚನ್ನಕೇಶವ, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಉಪಾಧ್ಯಕ್ಷ ಶಿವರಾಮ್ ಶೆಟ್ಟಿ, ಸದಸ್ಯರಾದ ಡಿ.ಎನ್.ಸುಧಾಕರ್, ಉಪೇಂದ್ರ ಆಚಾರ್ಯ, ಬಿ.ಗಿರೀಶ್ ಬಂದಿಯಡ್ಕ, ಮಣಿಕಂಠ, ಶ್ರೀಕೃಷ್ಣ ಭಟ್, ಬಿ.ಎಚ್.ಚಂದ್ರಶೇಖರ್, ಬಿ.ಎ.ರಾಜಪ್ಪ ಗೌಡ, ಗೋಪಾಲಕೃಷ್ಣ, ಹೊನ್ನಯ್ಯ, ಸುಂದರ್ ಇಟ್ಟಿಗೆ, ಅರ್ಚಕ ಸುಬ್ರಹ್ಮಣ್ಯ ಭಟ್, ಪೆಂಡಾಲ್ ನಿರ್ಮಾಣದ ಉಸ್ತುವಾರಿ ಮಂಜುನಾಥ್ ಇದ್ದರು.