ಕಡೂರಿನ ಕೋರ್ಟ್ ಆವರಣದಲ್ಲಿರುವ ಕೋತಿಗಳು.
- ಸಾರ್ವಜನಿಕರು, ವಕೀಲರು, ಸಿಬ್ಬಂದಿಗೆ ಕಿರಿರಿ
- ಮರದ ರೆಂಬೆಗಳು
ಕಡೂರು: ಪಟ್ಟಣದ ಕೋರ್ಟ್ ಆವರಣದೊಳಗೆ ಬರುತ್ತಿರುವ ಕೋತಿಗಳ ಉಪಟಳದಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ.
ಕೋತಿಗಳು ಕೋರ್ಟ್ ಆವರಣದೊಳಗೆ ಪ್ರವೇಶಿಸುತ್ತಿರುವುದರಿಂದ ಕಿರಿಕಿರಿ ಉಂಟಾಗುತ್ತಿದೆ.
ಕೋರ್ಟ್ ರಸ್ತೆಯ ಇಕ್ಕೆಲಗಳಲ್ಲಿರುವ ಮರದ ರೆಂಬೆಗಳು ಕಟ್ಟಡದ ಆವರಣದವರೆಗೆ ಚಾಚಿಕೊಂಡಿವೆ. ಇದರ ಮೂಲಕವೇ ಪ್ರವೇಶಿಸುವ ಕೋತಿಗಳು ನ್ಯಾಯಾಲಯದ ಸಭಾಂಗಣ, ಸಿಬ್ಬಂದಿ ಕೊಠಡಿಗಳನ್ನು ಪ್ರವೇಶಿಸುತ್ತಿರುವುದರಿಂದ ಕೋರ್ಟ್‌ನ ಸಿಬ್ಬಂದಿಯೂ ಹೈರಾಣಾಗಿದ್ದಾರೆ.
ಮುಖ್ಯವಾಗಿ ಕೋರ್ಟ್ ರಸ್ತೆಯಲ್ಲಿರುವ ಕ್ಯಾಂಟೀನ್‌ಗೆ ಹಿಂಡು ಹಿಂಡಾಗಿ ಲಗ್ಗೆ ಇಡುವ ಕೋತಿಗಳು ಅಲ್ಲಿನ ತಿನಿಸುಗಳನ್ನು ಅರ್ಧಂಬರ್ಧ ತಿಂದು ಕೋರ್ಟ್ ಆವರಣದೊಳಗೆ ಬಿಸಾಡುತ್ತವೆ. ಕಟ್ಟಡದ ಕಾರಿಡಾರ್ ಬಳಿ ಮಂಗಗಳನ್ನು ಓಡಿಸಲು ಹೋಗುವವರ ಮೇಲೂ ಎರಗುತ್ತವೆ. ಕೆಲವರ ಮೊಬೈಲ್‌ಗಳು, ಬ್ಯಾಗ್, ಹಣ್ಣಿನ ಪೊಟ್ಟಣಗಳನ್ನು ಕಿತ್ತುಕೊಂಡು ಬಿಸಾಡುತ್ತವೆ. ಕೋತಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.