ತರೀಕೆರೆ ವಕೀಲರ ಸಂಘದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ತರೀಕೆರೆ ನ್ಯಾಯಾಲಯದಿಂದ ವರ್ಗಾವಣೆಯಾಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ವೈದ್ಯ ಅವರಿಗೆ ವಕೀಲರ ಸಂಘದಿಂದ ಬೀಳ್ಕೊಡಲಾಯಿತು. ರಾಹುಲ್ ಶೆಟ್ಟಿಗಾರ್, ಊರ್ಮಿಳಾ, ಬಿ.ಪಿ.ರಾಜಶೇಖರ್ ಇತರರಿದ್ದರು.  
ಚಿಕ್ಕಮಗಳೂರು

ಕಕ್ಷಿದಾರರಿಗೆ ನಿಜವಾದ ನ್ಯಾಯ ಸಿಗಲಿ

ಜಿ. ಗಜೇಂದ್ರ
ತರೀಕೆರೆ: ಕಕ್ಷಿದಾರರಿಗೆ ನಿಜವಾದ ನ್ಯಾಯ ಸಿಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀಕಾಂತ್ ವೈದ್ಯ ಹೇಳಿದರು. 
ಪಟ್ಟಣದ ವಕೀಲರ ಸಂಘದಲ್ಲಿ ಮಂಗಳವಾರ ಬೀಳ್ಕೊಡುಗೆ ಅಂಗವಾಗಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೇವಾವಧಿಯಲ್ಲಿ ವರ್ಗಾವಣೆ ಪ್ರಕ್ರಿಯೆ ಅನಿವಾರ್ಯ. ಕಳೆದ 3 ವರ್ಷಗಳಿಂದ ಇಡೀ ವಕೀಲರ ವೃಂದ ವೈಯಕ್ತಿಕವಾಗಿ ನನಗೆ ನೀಡಿದ ಸಹಕಾರ ಮರೆಯುವಂತಿಲ್ಲ ಎಂದು ಹೇಳಿದರು. 
ನ್ಯಾಯಾಧೀಶ ರಾಹುಲ್ ಶೆಟ್ಟಿಗಾರ್ ಮಾತನಾಡಿ, ಹಿರಿಯ ಸಿವಿಲ್ ನ್ಯಾಯಾಧೀಶರು ಕರ್ತವ್ಯದ ವೇಳೆ ಎದುರಾಗುತ್ತಿದ್ದ ಹಲವು ಸಮಸ್ಯೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು ಎಂದು ಹೇಳಿದರು. 
 ನ್ಯಾಯಾಧೀಶೆ ಊರ್ಮಿಳಾ ಮಾತನಾಡಿ, ಶ್ರೀಕಾಂತ್ ಅವರ ಸರಳತೆ ಎಲ್ಲರಿಗೂ ಸ್ಪೂರ್ತಿ ಎಂದರು.  ಹಿರಿಯ ವಕೀಲ ಕೆ.ಎಲ್.ಲಿಂಗರಾಜು ಮಾತನಾಡಿ, ಶ್ರೀಕಾಂತ್ ವೈದ್ಯ ಅವರು ನ್ಯಾಯಾಲಯದಲ್ಲಿ ಕಲಾಪ ನಡೆಯುವಾಗ ಅತ್ಯಂತ ತಾಳ್ಮೆಯಿಂದ ವಾದ, ಪ್ರತಿವಾದಗಳನ್ನು ಆಲಿಸುವ ಗುಣ ಅಳವಡಿಸಿಕೊಂಡಿದ್ದರು ಎಂದು ಹೇಳಿದರು. 
    ವಕೀಲರ ಸಂಘದ ಅಧ್ಯಕ್ಷ ಬಿ.ಪಿ.ರಾಜಶೇಖರ್ ಮಾತನಾಡಿ, ಕಳೆದ 3 ವರ್ಷಗಳಲ್ಲಿ ನ್ಯಾಯಾಧೀಶ ಶ್ರೀಕಾಂತ್ ಅವರು ನ್ಯಾಯಾಲಯದ ಕಲಾಪಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದಾರೆ. ಉತ್ತಮ ತೀರ್ಪುಗಳನ್ನು ನೀಡಿ ಕಕ್ಷಿದಾರರಿಗೆ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದರು. 
 ವಕೀಲರ ಸಂಘದ ಉಪಾಧ್ಯಕ್ಷ ಜಕಣಾಚಾರಿ, ಕಾರ್ಯದರ್ಶಿ ಎಸ್.ಪ್ರಕಾಶ್, ಸರ್ಕಾರಿ ಅಪರ ವಕೀಲ ಟಿ.ಜೆ.ಜಗದೀಶ್, ವಕೀಲರಾದ ಟಿ.ಎಲ್.ಪ್ರಕಾಶ್, ಕೆ.ಲಿಂಗರಾಜು, ಎಸ್.ಎನ್.ಮಲ್ಲೇಗೌಡ, ಟಿ.ಎನ್.ಮಹದೇವಸ್ವಾಮಿ, ರ್ಇಾನ್ ಅಹಮದ್ ಬೇಗ್, ಅಬ್ದುಲ್ ರಜಾಕ್, ಅನುರಾಧ, ಕೆ.ಎಸ್.ಹರ್ಷ, ಎಚ್.ಸಿ.ಸತೀಶ್‌ಕುಮಾರ್, ಟಿ.ಪಿ.ತೇಜಸ್ವಿನಿ ಮತ್ತಿತರರಿದ್ದರು.