ಚೌಳಹಿರಿಯೂರು ಸಮೀಪ ಸಂಕ್ಲಾಪುರದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಕೆ.ವಿರೂಪಾಕ್ಷಪ್ಪ, ವೈ.ಎಸ್.ರವಿ ಪ್ರಕಾಶ್, ಎಸ್.ಮಲ್ಲಿಕಾರ್ಜುನ್, ಎಸ್.ಎಚ್.ಮಲ್ಲಿಕಾರ್ಜುನ, ಅರೇಹಳ್ಳಿ ಮೋಹನ್, ಕಲ್ಕೆರೆ ಈಶ್ವರಪ್ಪ ಇತರರಿದ್ದರು.
ಚೌಳಹಿರಿಯೂರು: ಅನುಭವ ಮಂಟಪ ಕಲ್ಯಾಣದಲ್ಲಿ ಮಾತ್ರ ಇತ್ತು ಎಂದಲ್ಲ. ಎಲ್ಲೆಲ್ಲಿ ಕುಳಿತು ಒಳ್ಳೆಯ ವಿಚಾರಗಳ ಚಿಂತನ-ಮಂಥನ ಮಾಡುತ್ತೇವೆಯೋ ಅದೇ ಒಂದು ಅನುಭವ ಮಂಟಪ. ಈ ನಿಟ್ಟಿನಲ್ಲಿ ಪ್ರತಿ ಮನೆಗಳೂ ಅನುಭವ ಮಂಟಪಗಳಾಗಬೇಕು ಎಂದು ಸಾಣೇಹಳ್ಳಿ ಶ್ರೀಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಕಡೂರು ತಾಲೂಕು ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಶ್ರೀಮಠ ಸಾಣೇಹಳ್ಳಿ ಆಶ್ರಯದಲ್ಲಿ ಸಂಕ್ಲಾಪುರದ ಕಾಂತರಾಜ್ ಮನೆಯಂಗಳದಲ್ಲಿ ಶ್ರಾವಣ ಸಂಜೆ ಶರಣರ ಸಂದೇಶ ಮತ್ತು ಅನುಭಾವದೆಡೆಗೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
12ನೇ ಶತಮಾನದಲ್ಲಿ ಅನುಭವ ಮಂಟಪ ಜನರ ಬದುಕಿಗೆ ಹೊಸ ದಿಕ್ಕನ್ನು ತೋರಿಸಿತು. ಅಂದು ಸಮಾಜದಲ್ಲಿ ಅನೇಕ ರೀತಿಯ ಅಸಮಾನತೆಗಳಿದ್ದವು. ಜಾತಿ, ಮೂಢನಂಬಿಕೆ, ಮೇಲು-ಕೇಳು ಎನ್ನುವ ತಾರತಮ್ಯ, ಲಿಂಗ ಅಸಮಾನತೆ ಜತೆಗೆ ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ವಾತಾವರಣ ಇರಲಿಲ್ಲ. ಇಂದು ಯುವಕರು ದಾರಿ ತಪ್ಪುತ್ತಿದ್ದು ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲು ತಂದೆ ತಾಯಿಗಳು ಇಂತಹ ಕಾರ್ಯಕ್ರಮಗಳಿಗೆ ಕರೆತಂದು ಅವರಲ್ಲಿ ಒಳ್ಳೆಯ ಚಿಂತನೆಗಳು ಮೂಡುವಂತೆ ಮಾಡಬೇಕಿದೆ. ಮಕ್ಕಳಲ್ಲಿ ವಚನಗಳನ್ನು ಹೇಳುವ ಮತ್ತು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಮಾಡಿದಾಗ ಮಾತ್ರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಅನುಭವ ಮಂಟಪ ಕುರಿತು ಆದ್ರಿಕಟ್ಟೆ ಬಸವರಾಜ ಉಪನ್ಯಾಸ ನೀಡಿದರು. ಶತಾಯುಷಿ ಗಂಗಮ್ಮ, ಸಾಧಕರಾದ ಯಶೋದಮ್ಮ ಕರಿಯಪ್ಪ ಮತ್ತು ಲತಾ ಧರಣೇಶ್ ಅವರನ್ನು ಅಭಿನಂದಿಸಲಾಯಿತು.
ತಾಲೂಕು ಕೃಷಿ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಕಾಂತರಾಜ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಉಪಾಧ್ಯಕ್ಷ ವೈ.ಎಸ್.ರವಿ ಪ್ರಕಾಶ್, ಎಸ್.ಮಲ್ಲಿಕಾರ್ಜುನ್, ಎಸ್.ಎಚ್.ಮಲ್ಲಿಕಾರ್ಜುನ, ಕಾರ್ಯದರ್ಶಿ ಅರೇಹಳ್ಳಿ ಮೋಹನ್, ಕಲ್ಕೆರೆ ಈಶ್ವರಪ್ಪ, ಜೆ.ಎಸ್.ಜಗದೀಶ್, ಕೆ.ಎಚ್.ರಂಗಪ್ಪ, ಡಿ.ಕೆ.ಚಂದ್ರಪ್ಪ, ಎಚ್.ಸಿ.ಹಾಲಪ್ಪ, ಎಚ್.ಎಂ.ಅನಿಲ್‌ಕುಮಾರ್, ಸರೋಜಮ್ಮ, ಬೇಗೂರು ಮರುಳಪ್ಪ ಇತರರಿದ್ದರು.