ಎನ್.ಆರ್.ಪುರ ಟಿಎಪಿಸಿಎಂಎಸ್‌ಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಳಲಿ ಶ್ರೀನಿವಾಸ್ ಅವರನ್ನು ಅಭಿನಂದಿಸಲಾಯಿತು.  
ಚಿಕ್ಕಮಗಳೂರು

ಟಿಎಪಿಸಿಎಂಎಸ್‌ಗೆ ಮಳಲಿ ಶ್ರೀನಿವಾಸ್ ಅಧ್ಯಕ್ಷ

ಎನ್.ಆರ್.ಪುರ: ಟಿಎಪಿಸಿಎಂಎಸ್‌ನ ನೂತನ ಅಧ್ಯಕ್ಷರಾಗಿ ಮಳಲಿ ಶ್ರೀನಿವಾಸ್ ಅವಿರೋಧ ಆಯ್ಕೆಯಾದರು.
ಟಿಎಪಿಸಿಎಂಎಸ್‌ಅಧ್ಯಕ್ಷ ಎಸ್.ಗೋಪಾಲ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಮಳಲಿ ಶ್ರೀನಿವಾಸ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜ್, ಮಳಲಿ ಶ್ರೀನಿವಾಸ್ ಅವರ ಅವಿರೋಧವಾಗಿ ಆಯ್ಕೆ ಘೋಷಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ನೀಲೇಶ್ ಮಾತನಾಡಿ, ಟಿಎಪಿಸಿಎಂಎಸ್ ರೈತರ ಸಂಸ್ಥೆಯಾಗಿದ್ದು, ರೈತರಿಗೆ ಅನುಕೂಲವಾಗುವ ಎಲ್ಲ ಕೃಷಿ ಪರಿಕರ, ಗೊಬ್ಬರಗಳನ್ನು ನೀಡಿ ಸಂಸ್ಥೆಯನ್ನು ಲಾಭದಾಯಿಕವಾಗಿ ನಡೆಸಬೇಕು ಎಂದರು.
ನಿರ್ದೇಶಕಿ ಮೀನಾಕ್ಷಿ ಕಾಂತರಾಜ್ ಮಾತನಾಡಿ, ವೈದ್ಯನಾಥನ್ ವರದಿ ಬಂದ ಮೇಲೆ ಸಹಕಾರ ಸಂಘಗಳಿಗೆ ಹಲವು ಸವಾಲುಗಳು ಎದುರಾಗಿದೆ ಎಂದರು.
ನೂತನ ಅಧ್ಯಕ್ಷ ಮಳಲಿ ಶ್ರೀನಿವಾಸ್ ಮಾತನಾಡಿ, ಸಂಘದ ಐದು ವರ್ಷದ ಅಡಳಿತದ ಅವಧಿಯಲ್ಲಿ ಈಗಾಗಲೇ ಮೂವರು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಾನು 4ನೇ ಅಧ್ಯಕ್ಷನಾಗಿದ್ದೇನೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಸಂಘದ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರುಣಕುಮಾರ್, ಮಾಜಿ ಅಧ್ಯಕ್ಷ ಬೆಮ್ಮನೆ ಮೋಹನ್, ಎಸ್.ಗೋಪಾಲ್, ಬಿಜೆಪಿ ಮುಖಂಡ ಸಂಪತ್‌ಕುಮಾರ್, ಬಿಜೆಪಿ ವಕ್ತಾರ ಎನ್.ಎಂ.ಕಾಂತರಾಜ್, ಉಪಾಧ್ಯಕ್ಷ ಸೀತಾರಾಮ, ನಿರ್ದೇಶಕರಾದ ಜಿ.ಎಂ.ಪ್ರಕಾಶ್, ಎಚ್.ಡಿ.ಮಿಥುನ, ಕೆ.ಎಂ.ಜಗದೀಶ್, ಎಂ.ಟಿ.ಕುಮಾರ್, ರಾಜಪ್ಪಗೌಡ, ಬಿ.ಎಂ.ರಾಮಚಂದ್ರ, ಎಸ್.ರಂಗಪ್ಪ, ಜಗದೀಶ್, ಸುಧಾಕರ, ಎಚ್.ಇ.ದಿವಾಕರ, ವಿಜಯಕುಮಾರ್, ಸಂದೇಶ, ಡಿ.ಆರ್.ಈಶ್ವರ್ ಮತ್ತಿತರರು ಇದ್ದರು.