ಶೃಂಗೇರಿ ತಾಲೂಕು ಮೆಣಸೆ ಗ್ರಂಥಾಲಯದಲ್ಲಿ ಬೇಸಿಗೆ-ಬೆಸುಗೆ ಕಾರ್ಯಕ್ರಮವನ್ನು ಶ್ರೀನಿವಾಸ ಅವಧಾನಿ ಉದ್ಘಾಟಿಸಿದರು. ಎ.ಕೆ.ಪಾಟೀಲ್, ಗ್ರಾಮ ಪಂಚಾಯಿತಿಯ ದಿಲೀಪ, ಅನಿತಾ, ಅಶೋಕ್, ನಾಗರಾಜ್, ಲಿಂಗಪ್ಪ, ರಾಘು ಇತರರಿದ್ದರು.
ಶೃಂಗೇರಿ: ರಜಾ ದಿನವನ್ನು ಮಕ್ಕಳು ಸದುಪಯೋಗಪಡಿಸಿಕೊಳ್ಳಲು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಮೇ 29ರವರೆಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೆಣಸೆ ಗ್ರಂಥಪಾಲಕ ಶ್ರೀನಿವಾಸ್ ಹೇಳಿದರು.
ಮೆಣಸೆ ಸಾರ್ವಜನಿಕ ಗ್ರಂಥಾಲಯದಲ್ಲಿ ಬೇಸಿಗೆ-ಬೆಸುಗೆ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಶಾಲೆಯಿಂದ ಹೊರಗೆ ಇರುವಾಗಲೂ ಚಟುವಟಿಕೆಯಿಂದ ಇರಲು ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಕಂದಾಯ ಇಲಾಖೆ ನಿವೃತ್ತ ಉದ್ಯೋಗಿ ಶ್ರೀನಿವಾಸ ಅವಧಾನಿ ಮಾತನಾಡಿ, ಸ್ಥಳೀಯವಾಗಿ ಗ್ರಂಥಾಲಯದಲ್ಲಿ ಮಕ್ಕಳಿಗೆ ಸೌಲಭ್ಯ ದೊರಕುತ್ತಿರುವುದನ್ನು ಸದುಪಯೋಗಪಡಿಸಿಕೊಳ್ಳಬೇಕು. ಗ್ರಂಥಾಲಯದಲ್ಲಿ ಇರುವ ಪುಸ್ತಕ, ದಿನಪತ್ರಿಕೆಯನ್ನು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಪಂಚಾಯಿತಿ ನೋಡಲ್ ಅಧಿಕಾರಿ ಎ.ಕೆ.ಪಾಟೀಲ್, ಗ್ರಾಮ ಪಂಚಾಯಿತಿಯ ದಿಲೀಪ, ಅನಿತಾ, ಅಶೋಕ್, ನಾಗರಾಜ್, ಲಿಂಗಪ್ಪ, ರಾಘು ಇತರರಿದ್ದರು.