ಸೌತಿಕೆರೆ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಲಾಯಿತು. ವೈ.ಎಂ.ಲಲಿತಾ, ಡಾ. ಭರತ್, ಡಾ. ಕ್ಷಮಾ, ಡೈಸಿ, ಶೋಭಿ, ಮಿನಿ, ಆರ್.ಕೆ.ಸುಹಾಸ್ ಇದ್ದರು. 
ಚಿಕ್ಕಮಗಳೂರು

ಶುಚಿ ಬಳಸಿ ಶುಚಿತ್ವ ಕಾಪಾಡಿ

ಎಸ್.ಎನ್.ರವೀಂದ್ರ

ಪ್ರಮುಖ ಮುಖ್ಯಾಂಶಗಳು

  • ಹೆಣ್ಣು ಮಕ್ಕಳಿಗೆ ಶುಚಿ ಸ್ಯಾನಿಟರಿ ನ್ಯಾಪ್ಕಿನ್
  • ಆರೋಗ್ಯ ಸಮಸ್ಯೆಗಳು
ಎನ್.ಆರ್.ಪುರ: ಶುಚಿ ಬಳಸಿ ಮುಟ್ಟಿನ ಶುಚಿತ್ವ ಕಾಪಾಡಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ತಿಳಿಸಿದರು. 
ಸೌತಿಕೆರೆ ಕಿತ್ತೂರು ರಾಣಿ ಚನ್ನಮ್ಮ  ವಸತಿ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ನಡೆದ ತಾಲೂಕು ಮಟ್ಟದ ಹದಿಹರೆಯದ ಹೆಣ್ಣು ಮಕ್ಕಳಿಗೆ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹದಿಹರಿಯದ ಹೆಣ್ಣು ಮಕ್ಕಳ ಮುಟ್ಟಿನ ನೈರ್ಮಲ್ಯಕ್ಕಾಗಿ ಸರ್ಕಾರ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸುತ್ತಿದೆ. ಮುಟ್ಟಿನ ನೈರ್ಮಲ್ಯ ಕಾಪಾಡದಿದ್ದಲ್ಲಿ ಹೆಣ್ಣು ಮಕ್ಕಳು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರಿ, ಅನುದಾನಿತ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸ್ಯಾನಿಟರಿ ನಾಪ್ಕಿನ್ ವಿತರಿಸಲಾಗುತ್ತಿದೆ. ಎಲ್ಲ ವಿದ್ಯಾರ್ಥಿನಿಯರು ಮಾಹಿತಿ ಪಡೆದು ಸಮರ್ಪಕವಾಗಿ ಬಳಸಿ ಎಂದು ಸಲಹೆ ನೀಡಿದರು. 
ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಭರತ್ ಮಾತನಾಡಿ, ಹದಿಹರೆಯದಲ್ಲಿ ಪೌಷ್ಟಿಕ ಆಹಾರ ಸೇವಿಸುವುದರ ಮೂಲಕ ಕಲಿಕೆಯಲ್ಲಿ ಆಸಕ್ತಿ ವಹಿಸಲು ಮತ್ತು ಗ್ರಹಿಸಲು ಹೆಚ್ಚಿನ ಒತ್ತು ಕೊಡಬೇಕು. ಋತುಸ್ರಾವ ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಯಾವುದಾದರೂ ಆರೋಗ್ಯ ಸಮಸ್ಯೆಗಳು ಕಂಡುಬಂದರೆ ಸಂಕೋಚಪಡದೆ ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು. 
ವಿದ್ಯಾರ್ಥಿನಿಯರಿಗೆ ಶುಚಿ ಸ್ಯಾನಿಟರಿ ವಿತರಿಸಿ ಬಳಸುವ ಮತ್ತು ವಿಲೇವಾರಿ ಮಾಡುವುದರ ಬಗ್ಗೆ ಮಾಹಿತಿ ನೀಡಲಾಯಿತು. ನಮ್ಮ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಕ್ಷಮಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ತಾಲೂಕು ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿಗಳಾದ ಡೈಸಿ, ಶೋಭಿ ಹಾಗೂ  ಸಮುದಾಯ ಆರೋಗ್ಯ ಅಧಿಕಾರಿ ಮಿನಿ, ಆಪ್ತ ಸಮಾಲೋಚಕ ಆರ್.ಕೆ.ಸುಹಾಸ್, ದಿವ್ಯಾ ಇದ್ದರು.