ಮೂಡಿಗೆರೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ನಡೆದ ಶಿಬಿರದಲ್ಲಿ ಯುವಕರು ರಕ್ತದಾನ ಮಾಡಿದರು. ಎ.ಎಂ.ಶರೀಫ್ ಹಾಜಿ, ಹರ್ಷವರ್ಧನ್, ಡಾ. ಜಿ.ಕೆ.ಭರತ್, ಮುಸ್ತಫಾ ಯಮಾನಿ, ಸಿ.ಕೆ.ಇಬ್ರಾಹಿಂ ಹಾಜಿ, ಫಿಶ್ ಮೋಣು, ಹೈದರ್ ಜೀಯ ಇತರರಿದ್ದರು 
ಚಿಕ್ಕಮಗಳೂರು

ಯುವಜನರು ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡಲಿ

ಮೂಡಿಗೆರೆ: ರಕ್ತದಾನಕ್ಕೆ ಸಮಾಜದಲ್ಲಿ ಶ್ರೇಷ್ಠ ಸ್ಥಾನವಿದೆ. ಪ್ರತಿಯೊಬ್ಬರೂ ರಕ್ತದಾನದ ಶಿಬಿರದಲ್ಲಿ ಪಾಲ್ಗೊಂಡು ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರ ನೀಡಬೇಕು ಎಂದು ಮೂಡಿಗೆರೆ ಪಿಎಸ್‌ಐ ಹರ್ಷವರ್ಧನ್ ಹೇಳಿದರು. 
  ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಭಾನುವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿ, ರಕ್ತಕ್ಕಾಗಿ ರೋಗಿಗಳ ಸಂಬಂಧಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರತಿ ರೋಗಿಗೂ ಅವರು ದಾಖಲಾಗಿರುವ ಆಸ್ಪತ್ರೆಯಲ್ಲಿ ರಕ್ತ ಸಿಗುವಂತಿರಬೇಕು. ರಕ್ತವನ್ನು ಯಾವುದೆ ಘಟಕದಲ್ಲಿ ಉತ್ಪಾದಿಸಲು ಸಾಧ್ಯವಿಲ್ಲ. ಶಿಬಿರದಲ್ಲಿ ಆರೋಗ್ಯವಂತ ಯುವಜನರು ರಕ್ತದಾನ ಮಾಡಿದರೆ ಪ್ರತಿ ಆಸ್ಪತ್ರೆಯ ರಕ್ತನಿಧಿಯಲ್ಲಿ ರೋಗಿಗಳಿಗೆ ಸೂಕ್ತ ಸಮಯದಲ್ಲಿ ರಕ್ತ ಸಿಗಲಿದೆ ಎಂದು ತಿಳಿಸಿದರು. 
ಬದ್ರಿಯಾ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಎ.ಎಂ.ಶರೀಫ್ ಹಾಜಿ, ಕಾರ್ಯದರ್ಶಿ ಎಂ.ಎಚ್.ಇಸ್ಮಾಯಿಲ್, ಖತೀಬ್, ಮುಸ್ತಫಾ ಯಮಾನಿ, ಸಂಯುಕ್ತ ಜಮಾತ್ ಒಕ್ಕೂಟದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ ಹಾಜಿ, ರಕ್ತನಿಧಿ ವಿಭಾಗದ ಮುಖ್ಯಸ್ಥ ಮಧು, ಧರ್ಮಗುರುಗಳಾದ ಶಂಸುದ್ದೀನ್ ಯಮಾನಿ, ಯಾಕೂಬ್ ಫೈಝಿ, ಹಸೈನಾರ್ ಮುಸ್ಲಿಯಾರ್, ಮುಖಂಡರಾದ ಇಬ್ರಾಹಿಂ ಯಾದ್ಗಾರ್, ಅಬ್ರಾರ್ ಅಹಮದ್, ಹೈದರ್ ಜೀಯ, ಫಿಶ್ ಮೋಣು ಇತರರಿದ್ದರು.