ಕೊಪ್ಪ: ಭಜನೆ ಭಕ್ತಿಯ ಮಾರ್ಗವಾಗಿದ್ದು, ನಾವು ಭಕ್ತಿಯ ಗೀತೆಗಳನ್ನು ಕಂಠಪಾಠ ಮಾಡುವುದರಿಂದ ಒಳ್ಳೆಯ ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಶೃಂಗೇರಿ ಶಂಕರ ತತ್ವ ಪ್ರಸಾರ ಅಭಿಯಾನದ ರಾಜ್ಯ ಸಂಚಾಲಕ ತೇಜ ಶಂಕರ ಸೋಮಯಾಜಿ ಹೇಳಿದರು.
ಗಾಯತ್ರಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಂಕರ ವಿರಚಿತ ಭಜನಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿ, ಪುಸ್ತಕದಲ್ಲಿರುವ ಗೀತೆಗಳನ್ನು ಪ್ರತಿಯೊಬ್ಬರು ಕಂಠಪಾಠ ಮಾಡಿ ನಿತ್ಯ ಭಜನೆಯಲ್ಲಿ ಭಾಗವಹಿಸುವಂತೆ ಆಗಬೇಕು. ಮುಂದಿನ ದಿನದಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆ ಭಜನ ತಂಡದಲ್ಲಿ ಇರುವಂತಾಗಬೇಕು ಎಂದರು.
ಭಜನಾ ಸ್ಪರ್ಧೆ ಕಾರ್ಯಕ್ರಮದಲ್ಲಿ 14 ಭಜನಾ ತಂಡಗಳು ಸ್ಪರ್ಧಿಸಿದ್ದವು. ಕೊಪ್ಪದ ಮಹಾಲಕ್ಷ್ಮಿ ಭಜನಾ ತಂಡ ಪ್ರಥಮ, ಶ್ರೀ ಲಕ್ಷ್ಮೀ ವೆಂಕಟರಮಣ ಭಕ್ತವೃಂದ ಕೆಸವೆ ದ್ವಿತೀಯ, ಕೊಪ್ಪ ಮೇಲಿನ ಪೇಟೆ ಭಾರತ ಮಾತಾ ಭಜನಾ ತಂಡ ತೃತೀಯ ಸ್ಥಾನ ಪಡೆಯಿತು. ಕಾಯಕ್ರಮದಲ್ಲಿ ಶ್ರೀ ಶಂಕರರ ಕುರಿತಾದ ರಸಪ್ರಶ್ನೆ ಹಾಗೂ ಸ್ತೋತ್ರ ಸ್ಪರ್ಧೆಯೂ ನಡೆಯಿತು.
ಶೃಂಗೇರಿ ಶಂಕರ ತತ್ವ ಪ್ರಸಾರ ಅಭಿಯಾನದ ಜಿಲ್ಲಾಧ್ಯಕ್ಷ ರಾಮ್ ಪ್ರಸಾದ್, ಕೊಪ್ಪ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೃಷ್ಣಮೂರ್ತಿ, ಕಾಫಿ ಬೆಳೆಗಾರರಾದ ಎಚ್.ಜಿ ವೆಂಕಟೇಶ್, ವೈದ್ಯ ಅಶ್ವಿನ್ ಕುಮಾರ್, ಸುಜಾತ ದಯಾನಂದ , ರಾಕೇಶ್, ಸದಾಶಿವ ಭಟ್, ರವಿ ಪಟವರ್ಧನ್, ಶ್ರೀನಾಥ್, ಟಿ.ವಿ.ಶ್ರೀಮತಿ ನಾಗರಾಜ್, ಮಂಗಳಾ ಪ್ರಸಾದ್, ನಟರಾಜ್ ಗೋಗಟೆ ಉಪಸ್ಥಿತರಿದ್ದರು.