ಕುದುರೆಮುಖ ವಿನೋಬನಗರದಲ್ಲಿ 4ನೇ ವಷರ್ದ ಮಲ್ನಾಡ್ ಕ್ಯಾಂಪ್ ಸಮಾರೋಪ ನಡೆಯಿತು. ಕಾರಿಯಪ್ಪ, ಮಂಜುಳಾ, ಮುರುಗನ್ ಇತರರಿದ್ದರು.
ಕಳಸ: ಕುದುರೆಮುಖ ಮತ್ತು ಸುತ್ತಮುತ್ತಲಿನ ಗ್ರಾಮೀಣ ಭಾಗದ ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ 4ನೇ ವರ್ಷದ ಮಲ್ನಾಡ್ ಕ್ಯಾಂಪ್ ಸಮಾರೋಪ ಕುದುರೆಮುಖದ ವಿನೋಬನಗರದಲ್ಲಿ ನಡೆಯಿತು.
ಸ್ರುಮ್ ಸೊ ಸಿನಿಮಾ ನಿರ್ಮಾಪಕ ರವಿ ರೈ ಕಳಸ ಮಾತನಾಡಿ, ಮಲೆನಾಡಿನ ಗ್ರಾಮೀಣ ಭಾಗದ ಮಕ್ಕಳಿಗೆ ಇದೊಂದು ಅಭೂತಪೂರ್ವ ವೇದಿಕೆಯಾಗಿದೆ. ಇಂಥ ಕ್ಯಾಂಪ್‌ಗಳಿಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಬರಲು ಸಾಧ್ಯ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ಈ ಕಾರ್ಯಕ್ರಮಕ್ಕೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ಶುಭ ಹಾರೈಸಿದರು.
ವಿಕ್ಕಿ ಕುದುರೆಮುಖ ಅವರ ನೇತೃತ್ವ ಹಾಗೂ ಸಂಘಟನೆಯಲ್ಲಿ ಮೂಡಿಬಂದ ಈ ಕ್ಯಾಂಪ್‌ನಲ್ಲಿ ಮಕ್ಕಳಿಗೆ ವೈವಿಧ್ಯಮಯ ಕಲೆಗಳ ತರಬೇತಿ ನೀಡಲಾಯಿತು.
ಸಮಾರೋಪದ ಪ್ರಮುಖ ಆಕಷರ್ಣೆಯಾಗಿ ವಿವಿಧ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವ ನೃತ್ಯ ತಂಡಗಳಾದ ಉಜಿರೆಯ ಹಿಪ್‌ಬಾಯ್ಸ ತಂಡ, ಬಂಟ್ವಾಳದ ಬಿಡಬ್ಲುೃಸಿ ಸ್ಟುಡಿಯೋದ ಆನಂದ್ ಮತ್ತು ತಂಡ ಹಾಗೂ ಕಳಸದ ಅಭಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ಜರುಗಿತು.
ಕುದುರೆಮುಖದ ಜನರಲ್ ಮ್ಯಾನೇಜರ್ ಕಾರಿಯಪ್ಪ, ಅಂಗನವಾಡಿ ಶಿಕ್ಷಕಿ ಮಂಜುಳಾ, ಸಿವಿಲ್ ಗುತ್ತಿಗೆದಾರ ಮುರುಗನ್, ಮಂಗಳೂರಿನ ಪೈಂಟ್ ಗುತ್ತಿಗೆದಾರ ಕುಮಾರ್, ನಾರ್ವೆಯ ವಿಂಡ್ಸಿಮ್ ಸಂಸ್ಥೆಯ ಸೇಲ್ಸ್ ಡೈರೆಕ್ಟರ್ ದೀಶಿತ್ ಪ್ರೇಮ್ ಜೈನ್, ಬಿಲ್ಲವ ಸಮಾಜದ ಅಧ್ಯಕ್ಷ ಮಂಜಪ್ಪ ಪೂಜಾರಿ, ಕುದುರೆಮುಖ ಅಂಚೆ ಕಚೇರಿಯ ಸಿದ್ದಪ್ಪ ಹಾಗೂ ಚೋಯಿ ಇದ್ದರು.