ಎನ್.ಆರ್.ಪುರ ಡಿಸಿಎಂಸಿ ಶಾಲೆಯಲ್ಲ್ಲಿ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು. ಮಂಜುಳಾ ಇದ್ದರು. 
ಚಿಕ್ಕಮಗಳೂರು

ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಲಿ

ಎನ್.ಆರ್.ಪುರ: ಶಿಕ್ಷಣ ಪಡೆಯುವುದು ಎಂದರೆ ಹೆಚ್ಚು ಅಂಕ ಗಳಿಸುವ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುನಿರಾಜ ರೆಂಜಾಳ ತಿಳಿಸಿದರು.
ಡಿಸಿಎಂಸಿ ಶಾಲೆಯಲ್ಲಿ ಡಿಸಿಎಂಸಿ ಶಾಲೆ ಹಾಗೂ ಎಂಕೆಸಿಪಿಎಂ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಶಿಕ್ಷಣದ ಸಾರ್ಥಕತೆ ಕುರಿತಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಉತ್ತಮ ಗುಣ, ನಡತೆ, ಸಂಸ್ಕೃತಿ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ಗಮಕ ವಾಚಕಿ ಮಂಜುಳಾ ಸುಬ್ರಹ್ಮಣ್ಯಭಟ್ ಅವರು ಕುಮಾರವ್ಯಾಸನ ಗದುಗಿನ ಭಾರತದ ವಿರಾಟ ಪರ್ವದಿಂದ ಕಾವ್ಯ ಭಾಗದ ವಾಚನವನ್ನು ಸುಶ್ರಾವ್ಯವಾಗಿ ಹಾಡಿದರೆ, ಮುನಿರಾಜ ರೆಂಜಾಳರು ಕೀಚಕ ವಧೆಯ ಪೂರ್ವ ತಯಾರಿಯ ಕಥೆಯ ಹಿನ್ನೆಲೆಯನ್ನು ವ್ಯಾಖ್ಯಾನಿಸಿದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಸಂಸ್ಥೆಯ ಬೆಮ್ಮನೆ ದಯಾನಂದ್, ನಿರ್ದೇಶಕ ಶಾಮಯ್ಯ, ನಂದಿನಿ ಆಲಂದೂರು, ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್, ಪ್ರಾಚಾರ್ಯೆ ಪದ್ಮಾ ರಮೇಶ್, ಮಧುರಾ ಮಂಜುನಾಥ್, ಧೃತಿ, ಜ್ಞಾನೇಶ್, ಮಣಿಕಂಠ ಇತರರಿದ್ದರು.