:ತರೀಕೆರೆ ದಾರೂಲ್ ಉಲೂಂ ಅರೇಬಿಕ್ ಶಾಲೆಯಲ್ಲಿ ಪಿಎಸ್‌ಐ ನಾಗೇಂದ್ರನಾಯ್ಕ ಮಕ್ಕಳಿಗೆ ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ ಕುರಿತಾಗಿ ಅರಿವು ಮೂಡಿಸಿದರು. ಟಿ.ದಾದಾಪೀರ್, ಉಸ್ತಾದ್ ಕಮಾಲುದ್ದೀನ್ ಮರ್ಜೂಕಿ, ಉಸ್ತಾದ್ ಅಬುಬಕ್ಕರ್, ಖಾದರ್ ಇತರರಿದ್ದರು. 
ಚಿಕ್ಕಮಗಳೂರು

ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಿಸಲಿ

ತರೀಕೆರೆ: ಮಾದಕ ವ್ಯಸನ ಮತ್ತು ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಇಲಾಖೆ ಸನ್ಮಿತ್ರ ಎಂಬ ಯೋಜನೆ ಜಾರಿಗೊಳಿಸಿದ್ದು ಇದರ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಪಿಎಸ್‌ಐ ನಾಗೇಂದ್ರನಾಯ್ಕ ಹೇಳಿದರು.
ಪಟ್ಟಣದ ಸಾಹುಕಾರ್ ಶಾಫಿ ಮಸೀದಿಯಲ್ಲಿ ದಾರೂಲ್ ಉಲೂಂ ಅರೇಬಿಕ್ ಶಾಲೆ ಮಕ್ಕಳಿಗೆ ಮಾದಕ ದ್ರವ್ಯ ಬಳಕೆಯ ದುಷ್ಪರಿಣಾಮ ಕುರಿತಾಗಿ ಆಯೋಜಿಸಿದ್ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಪೋಕ್ಸೋ, ಗಾಂಜಾ, ಅಶಾಂತಿ ಮೂಡಿಸುವಂಥ ಸಮಾಜಕ್ಕೆ ಬೇಡವಾದ ಪ್ರಕರಣಗಳೇ ಪೊಲೀಸ್ ಠಾಣೆಯಲ್ಲಿ ಹೆಚ್ಚು ದಾಖಲಾಗುತ್ತಿದ್ದು ಇದನ್ನು ತಡೆಗಟ್ಟಲು ಶಾಲಾ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಪುರಸಭೆ ಸದಸ್ಯ ಟಿ.ದಾದಾಪೀರ್ ಮಾತನಾಡಿ, ಮದ್ರಸಾಗಳು ಮಕ್ಕಳಿಗೆ ಧಾರ್ಮಿಕ ಶಿಕ್ಷಣದನ್ವಯ ನೈತಿಕ ಮೌಲ್ಯ ಕಲಿಸುತ್ತಿವೆ ಎಂದು ಹೇಳಿದರು.
ಪ್ರಮುಖ ಉಸ್ತಾದ್ ಕಮಾಲುದ್ದೀನ್ ಮರ್ಜೂಕಿ ಮಾತನಾಡಿ, ಪ್ರವಾದಿ ಪೈಗಂಬರ್ ನೈತಿಕ ಮೌಲ್ಯ ಕಲಿಸಿದ್ದಾರೆ. ಕುಡಿತ ಎಲ್ಲ ಅಪರಾಧ ಕೃತ್ಯಗಳಿಗೆ ಮೂಲ ಕಾರಣವಾಗಿದ್ದು ಇದರ ವಿರುದ್ಧ ಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ ಎಂದರು. ಉಸ್ತಾದ್ ಅಬುಬಕ್ಕರ್ ಮಾತನಾಡಿ, ಮಕ್ಕಳು ಸಜ್ಜನರ ಸಹವಾಸ ಮಾಡಿ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಮಸೀದಿ ಕಾರ್ಯದರ್ಶಿ ಖಾದರ್, ಪ್ರಮುಖರಾದ ರಿಯಾಜ್ ಇದ್ದರು.