ಎನ್.ಆರ್.ಪುರ ಅಂಬೇಡ್ಕರ್ ವೃತ್ತದಲ್ಲಿ ವಿಹಿಂಪ ಹಾಗೂ ಬಜರಂಗದಳದ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು. 
ಚಿಕ್ಕಮಗಳೂರು

ದೇಶಕ್ಕಾಗಿ ಹಿಂದೂಗಳು ಸಂಘಟಿತರಾಗಲಿ

ಪ್ರಮುಖ ಮುಖ್ಯಾಂಶಗಳು

  • ಹಿಂದೂ ವಿರೋಧಿಗಳನ್ನು,
  • ಕಬಳಿಸುವ ಉದ್ದೇಶ
ಎನ್.ಆರ್.ಪುರ: ದೇಶದ ಹಿಂದೂಗಳ ಮೇಲಾಗುತ್ತಿರುವ ಕೃತ್ಯಗಳನ್ನು ವಿರೋಧಿಸಿ, ಹಿಂದೂ ಧರ್ಮದ ಉಳಿವಿಗಾಗಿ ವಿಎಚ್‌ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಸದಾ ಸಿದ್ಧರಿರುತ್ತಾರೆ ಎಂದು ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ದಿವೀರ್ ಮಲ್ನಾಡ್ ಹೇಳಿದರು.
ವಿಹಿಂಪ ಹಾಗೂ ಬಜರಂಗದಳ ಎನ್.ಆರ್.ಪುರ ಪ್ರಖಂಡ ಆಯೋಜಿಸಿದ್ದ ಅಖಂಡ ಭಾರತ ಸಂಕಲ್ಪ ದಿವಸ್ ಆಚರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶ ವಿರೋಧಿಗಳ ಸಂಖ್ಯೆ ಅಧಿಕವಾಗುತ್ತಿದೆ. ಹಿಂದೂ ಹೆಣ್ಣು ಮಕ್ಕಳ ಮೇಲೆ ಲವ್ ಜಿಹಾದ್ ಅಸ್ತ್ರ ಬಳಸಿ ಧರ್ಮವನ್ನೇ ನಾಶ ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಹಿಂದೂ ವಿರೋಧಿಗಳನ್ನು, ದೇಶ ವಿರೋಧಿಗಳನ್ನು ರಕ್ಷಿಸುವಂಥ ಸರ್ಕಾರ ನಮ್ಮ ರಾಜ್ಯದಲ್ಲಿರುವುದು ದುರಂತ. ಧರ್ಮದ ಆಧಾರದ ಮೇಲೆ ಅಖಂಡ ಭಾರತವನ್ನು ವಿಭಜನೆ ಮಾಡಲಾಯಿತು. ದೇಶದಲ್ಲಿ ವಕ್ಫ್ ಬೋರ್ಡ್ ಎಂಬ ಹೆಸರಿನಲ್ಲಿ ದೇಶದ ಬೆಲೆ ಬಾಳುವ ಆಸ್ತಿಗಳನ್ನು ಕಬಳಿಸುವ ಉದ್ದೇಶ ಹೊಂದಲಾಗಿದೆ. ಗಣೇಶ, ದುರ್ಗಾ ಮಾತೆ ಮೆರವಣಿಗೆ ಸಾಗುವಾಗ ಕಲ್ಲು ತೂರುವ ಹೇಯ ಕೃತ್ಯ ಮಾಡುತ್ತಿದ್ದಾರೆ. ಹಿಂದೂ ಕಾರ್ಯಕರ್ತರೆಲ್ಲರೂ ಎಚ್ಚೆತ್ತುಕೊಳ್ಳದೆ ಹೋದರೆ ಹಿಂದೂ ಧರ್ಮಕ್ಕೆ, ಭಾರತಕ್ಕೆ ಅಪಾಯವಿದೆ. ನಾವೆಲ್ಲರೂ ಸಂಘಟಿತರಾಗಿ ದೇಶ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಹೇಳಿದರು.
ಪ್ರವಾಸಿ ಮಂದಿರದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪಟ್ಟಣದ ಅಂಬೇಡ್ಕರ್ ವೃತ್ತದವರೆಗೆ ಹಿಂದೂ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ, ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಹಿಂದೂ ಧರ್ಮದ ಪರವಾದ ಘೋಷಣೆಗಳನ್ನು ಕೂಗಿದರು.
ವಿಹಿಂಪ ಶೃಂಗೇರಿ ಜಿಲ್ಲಾಧ್ಯಕ್ಷ ಕೆ.ಪಿ.ಸುರೇಶ್‌ಕುಮಾರ್, ತಾಲೂಕು ಅಧ್ಯಕ್ಷ ಕೋಣಿಕೆರೆ ಸತ್ಯನಾರಾಯಣ, ಮುಖಂಡರಾದ ವಿ.ನೀಲೇಶ್, ಅರುಣಕುಮಾರ್, ಎನ್.ಎಂ.ಕಾಂತರಾಜ್, ಪ್ರಫುಲ್ಲ ಕಣಿವೆ, ಮದನ್ ಗೌಡ, ಅಭಿಷೇಕ್ ಗಡಿಗೇಶ್ವರ, ಕೂಸ್ಗಲ್ ಪುರುಷೋತ್ತಮ್, ಸುರಭಿ ರಾಜೇಂದ್ರ, ದರ್ಶನ್, ಪ್ರೀತಮ್, ಸುಮಂತ್ ಗೌಡ, ದ್ವಾರಮಕ್ಕಿ ಅಶ್ವನ್, ಅರುಣ್‌ಕುಮಾರ್ ಜೈನ್, ಎನ್.ಡಿ.ಪ್ರಸಾದ್, ಎಂ.ಟಿ.ಪ್ರವೀಣ, ಮಾಂತೇಜ್ ಇತರರಿದ್ದರು.