ಮುತ್ತಿನಕೊಪ್ಪ ಗ್ರಾಪಂ ಚೌಡಿಕಟ್ಟೆ ಗ್ರಾಮದ ರಸ್ತೆ ಸಮೀಪದ ಅರಣ್ಯ ಪ್ರದೇಶಲ್ಲಿ ಕಂಡುಬಂದ ಚಿರತೆ. 
ಚಿಕ್ಕಮಗಳೂರು

ಚೌಡಿಕಟ್ಟೆ ಗ್ರಾಮದ ಅರಣ್ಯದಲ್ಲಿ ಚಿರತೆ ಪ್ರತ್ಯಕ್ಷ

ಪ್ರಮುಖ ಮುಖ್ಯಾಂಶಗಳು

  • ಚೌಡಿಕಟ್ಟೆಯ ಗ್ರಾಮದ ಮಕ್ಕಳನ್ನು
  • ಪಾಲಕರು ಶಾಲೆಗೆ ಕಳುಹಿಸಿದ್ದರು
ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಪಂ ಚೌಡಿಕಟ್ಟೆ ಗ್ರಾಮದ ರಸ್ತೆ ಸಮೀಪದ ಅರಣ್ಯ ಪ್ರದೇಶಲ್ಲಿ ಮಂಗಳವಾರ ಬೆಳಗ್ಗೆ ಚಿರತೆ ಕಂಡುಬಂದಿದ್ದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಬೈರಾಪುರ ಗ್ರಾಮದ ಸರ್ಕಾರಿ ಶಾಲೆ ಸಮೀಪದ ಪ್ರದೇಶದಲ್ಲಿ ಬೆಳಗ್ಗೆ ಚಿರತೆ ಇರುವುದನ್ನು ನೋಡಿರುವುದಾಗಿ ಮುತ್ತಿನಕೊಪ್ಪ ಗ್ರಾಪಂ ಮಾಜಿ ಸದಸ್ಯ ದೇವಂತ್ ಗೌಡ ಮಾಹಿತಿ ನೀಡಿದ್ದಾರೆ. 
ಮರಾಠಿ ಕ್ಯಾಂಪ್, ಚೌಡಿಕಟ್ಟೆಯ ಗ್ರಾಮದ ಮಕ್ಕಳನ್ನು ಮಂಗಳವಾರವೂ ಪಾಲಕರು ಶಾಲೆಗೆ ಕಳುಹಿಸಿದ್ದರು. ಸೋಮವಾರ ಸಂಜೆ ತಾಪಂ ಇಒ ಎಚ್.ಡಿ.ನವೀನ್‌ಕುಮಾರ್, ಎಇಇ ಸಾಗರ್ ಸೇರಿದಂತೆ ವಿವಿಧ ಅಧಿಕಾರಿಗಳು ಚೌಡಿಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳು ಶಾಲಗೆ ಬರುವ ದಾರಿ ವೈಲ್ಡ್ ಲೈಫ್ ಪ್ರದೇಶವಾಗಿರುವುದರಿಂದ, ಪರ್ಯಾಯ ದಾರಿಗಾಗಿ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ.  ಶಾಸಕರಿಗೆ ಅನುದಾನಕ್ಕಾಗಿ ಮನವಿ ಸಲ್ಲಿಸಿ, ತುರ್ತಾಗಿ ಪರ್ಯಾಯ ದಾರಿ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆಂದು ದೇವಂತ್ ಗೌಡ ತಿಳಿಸಿದ್ದಾರೆ.
ಪದೇಪದೆ ಚಿರತೆ ಕಾಣಿಸಿಕೊಳ್ಳುತ್ತಿದೆ. ತಹಸೀಲ್ದಾರ್ ಅವರು ಗ್ರಾಮಕ್ಕೆ ಭೇಟಿ ನೀಡಿ, ದಾರಿ ಮಾಡುವ ಜಾಗದ ಸರ್ವೇ ಮಾಡಿಸುವುದಾಗಿ ತಿಳಿಸಿದ್ದಾರೆ. ಸರ್ವೇಯರ್ ಇನ್ನೂ ಗ್ರಾಮಕ್ಕೆ ಬಂದಿಲ್ಲ. ಯಾವುದೇ ಜೀವ ಹಾನಿಯಾಗುವ ಮುನ್ನ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.