ಚಿಕ್ಕಮಗಳೂರಿನ ವಕೀಲ ವಿ.ಕೆ.ರಘು ಜಲಯೋಗ ಮಾಡುತ್ತಿರುವುದು. 
ಚಿಕ್ಕಮಗಳೂರು

ಜಲಯೋಗದಲ್ಲಿ ವಕೀಲ ವಿ.ಕೆ.ರಘು ವಿಶ್ವ ದಾಖಲೆ

ಚಿಕ್ಕಮಗಳೂರು: ನಗರದ ವಕೀಲ ವಿ.ಕೆ.ರಘು ಅವರು ಜಲಯೋಗ ಸಾಧನೆಯಲ್ಲಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿಯ ಅಂತರಾಷ್ಟಿçÃಯ ಯೋಗ ದಿನಾಚರಣೆ ಸಂದರ್ಭದಲ್ಲಿ ನೀರಿನ ಮೇಲೆ ೯೬೦ ಬಾರಿ ಶ್ರೀರಾಮನ ಮಂತ್ರಗಳನ್ನು ಪಠಿಸುತ್ತ ನಿರಂತರ ೨೩ ನಿಮಿಷ ೪೮ ಸೆಂಕೆAಡ್‌ವರೆಗೆ ವಿವಿಧ ಆಸನಗಳನ್ನು ಪ್ರದರ್ಶಿಸಿದ್ದರು.
ಇದನ್ನು ಪರಿಗಣಿಸಿದ ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ರಘು ಅವರಿಗೆ ವಿಶ್ವ ದಾಖಲೆಯ ಪ್ರಮಾಣ ಪತ್ರವನ್ನು ಘೋಷಿಸಿದೆ. ಜಲಯೋಗ ಪ್ರದರ್ಶನದ ಸಂದರ್ಭದಲ್ಲಿ ರಘು ಅವರು ಶವಾಸನ, ತಾಡಾಸನ, ಪದ್ಮಾಸನ ಮತ್ತು ಧನುರಾಸನವನ್ನು ಪ್ರಸ್ತುತ ಪಡಿಸಿದ್ದರು. ಈ ನಾಲ್ಕೂ ಪ್ರಮುಖ ಆಸನಗಳು ಶ್ರೀರಾಮ ತಮ್ಮ ಜೀವನ ಶೈಲಿಯ ಭಾಗವಾಗಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅವುಗಳನ್ನೇ ಆಯ್ಕೆ ಮಾಡಿಕೊಂಡಿದ್ದಾಗಿ ರಘು ತಿಳಿಸಿದ್ದಾರೆ.
ಜಲಯೋಗ ಸಾಧನೆಯಲ್ಲಿ ವಿಶ್ವದಾಖಲೆ ಬರೆದಿರುವ ರಘು ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸೇರಿದಂತೆ ಹಲವು ಗಣ್ಯರು, ಸಂಘ-ಸAಸ್ಥೆಗಳು ಅಭಿನಂದಿಸಿವೆ.
ಇದೇ ವೇಳೆ ಕಾಫಿನಾಡು ಸ್ನೇಹಜೀವಿ ಕಲಾ ತಂಡವು ಆಗಸ್ಟ್ ೯ರಂದು ನಗರದ ಟಿಎಂಎಸ್ ಸಭಾಂಗಣದಲ್ಲಿ ಜಾನಪದ ಹಾಗೂ ಭಾವಗೀತೆ ಸ್ಪರ್ಧೆ ಜೊತೆಗೆ ವಿಶ್ವದಾಖಲೆಗೆ ಪಾತ್ರರಾಗಿರುವ ವಿ.ಕೆ.ರಘು ಅವರಿಗೆ ಅಭಿನಂದಾನ ಸಮಾರಂಭ ಏರ್ಪಡಿಸಿದೆ.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಖ್ಯಾತ ಮಕ್ಕಳ ತಜ್ಞ ಡಾ.ಜೆ.ಪಿ.ಕೃಷ್ಣೇಗೌಡ, ಅಂತರಾಷ್ಟಿçÃಯ ಯೋಗ ದಿನಾಚರಣೆ ಸಮಿತಿ ಜಿಲ್ಲಾಧ್ಯಕ್ಷ ಸುರೇಂದ್ರ ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ಬ್ರಹ್ಮ ಕುಮಾರೀಸ್ ಸಂಸ್ಥೆಯ ಭಾಗ್ಯಕ್ಕ, ಯೋಗ ತಜ್ಞೆ ಡಾ. ಗೌರಿ, ನಗರಸಭೆ ಮಾಜಿ ಅಧ್ಯಕ್ಷರಾದ ಸಿ.ಆರ್.ಪ್ರೇಮ್ ಕುಮಾರ್, ವರಸಿದ್ಧಿ ವೇಣುಗೋಪಾಲ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.