ಕಡೂರಿನ ಖಂಡುಗದಹಳ್ಳಿ ಶ್ರೀಚೌಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ ಮಾಡಿರುವುದು. 
ಚಿಕ್ಕಮಗಳೂರು

ಖಂಡುಗದಹಳ್ಳಿ ಚೌಡೇಶ್ವರಿ ದೇವಿ ವರ್ಧಂತಿ ಮಹೋತ್ಸವ

ಕಡೂರು: ತಾಲೂಕಿನ ಖಂಡುಗದಹಳ್ಳಿಯ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದಲ್ಲಿ ಚೌಡೇಶ್ವರಿ ದೇವಿಯ ವರ್ಧಂತಿಯ ಪೂಜಾ ಮಹೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು.
ಆಷಾಡ ಶುಕ್ರವಾರದ ಅಂಗವಾಗಿ ಬೆಳಗ್ಗೆ ದೇವಾಲಯದಲ್ಲಿ ಶ್ರೀ ದೇವಿಗೆ ಪಂಚಾಮೃತ ಅಭಿಷೇಕ, ಸಂಕಲ್ಪ ಪೂಜೆ ಕಾರ್ಯಕ್ರಮಗಳು ನಡೆಯಿತು. ನಂತರ ಶ್ರೀ ಸೋಮೇಶ್ವರ ಸ್ವಾಮಿಯ ಒಕ್ಕಲಿನ ಮಹಿಳಾ ಭಕ್ತರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ, ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಯಿತು.
ದೇವಾಲಯದ ಧರ್ಮದರ್ಶಿ ಕೆ.ಬಿ. ಸೋಮೇಶ್ ಮಾತನಾಡಿ, ದೇವಿ ವರ್ಧಂತಿಯ ಪ್ರಯುಕ್ತ ಹಾಗೂ ಮಳೆಯಿಲ್ಲದೆ ಪರಿತಪಿಸುತ್ತಿರುವ ರೈತಾಪಿ ವರ್ಗಕ್ಕೆ ಮಳೆ ಕರುಣಿಸುವಂತೆ ಪೂಜೆ ಸಲ್ಲಿಸಲಾಗಿದೆ ಎಂದರು.