ಕಡೂರು ತಾಪಂ ಸಭಾಂಗಣದಲ್ಲಿ ನಡೆದ ನಾಡಪ್ರಭುಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಆನಂದ್ ಮಾತನಾಡಿದರು.
ಕಡೂರು: ಬೆಂಗಳೂರು ನಗರವನ್ನು ಜಾಗತಿಕ ಮಟ್ಟದಲ್ಲಿ ದಾಖಲಿಸಿದ ಕೀರ್ತಿ ನಾಡಪ್ರಭು ಕೆಂಪೇಗೌಡರಿಗೆ ಸಲ್ಲುತ್ತದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಿನ ರಕ್ಷಣೆಗಾಗಿ ಕಂಕಣ ಬದ್ದರಾಗಿ ಶ್ರಮಿಸುವ ಮೂಲಕ ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇದಕ್ಕೆ ಪೂರಕವಾಗಿ ರಾಜ್ಯದ ಅಭಿವೃದ್ಧಿಗೆ ಒಕ್ಕಲಿಗ ಸಮಾಜದ ಹಿರಿಯ ನಾಯಕ ಎಸ್.ಎಂ.ಕೃಷ್ಣ ವಿಕಾಸ ಸೌಧ, ಕುಮಾರಸ್ವಾಮಿ ಅವರು ಸುವರ್ಣಸೌಧ ನಿರ್ಮಿಸಿಕೊಡುವ ಮೂಲಕ ಕೂಡುಗೆ ಸಲ್ಲಿಸಿದ್ದಾರೆ ಎಂದರು.
ಡಿಪೋ ಮಾರ್ಗದ ರಸ್ತೆ ಸಮೀಪ ಸ್ಥಾಪಿತವಾಗಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಅದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದ ಸ್ವಾಮೀಜಿ ಅವರನ್ನು ಅಹ್ವಾನಿಸಿ ತಾಲೂಕು ಒಕ್ಕಲಿಗ ಸಮಾಜ ಮತ್ತು ತೆಲುಗು ಗೌಡ ಸಮಾಜ ಒಳಗೊಂಡು ಅದ್ಧ್ದೂರಿ ಕಾರ್ಯಕ್ರಮವನ್ನು ಶೀಘ್ರ ಅನಾವರಣಗೊಳಿಸಲಾಗುವುದು ಎಂದರು.
ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಲಕ್ಕಪ್ಪ ಉಪನ್ಯಾಸ ನೀಡಿದರು. ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ, ತಾಪಂ ಇಒ ಸಿ.ಆರ್.ಪ್ರವೀಣ್, ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ವಿಜಯ್‌ಕುಮಾರ್, ತೆಲುಗುಗೌಡ ಸಮಾಜದ ಮುಖಂಡ ಜಿಗಣೇಹಳ್ಳಿ ಲೋಕೇಶ್, ಶ್ರೀಧರ್, ಚೇತನ್, ಗೋಪಿ, ಹೊ.ರಾ.ಕೃಷ್ಣಕುಮಾರ್, ರಾಜಕುಮಾರ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಲ್. ರುದ್ರೇಗೌಡ ಮತ್ತಿತರಿದ್ದರು.