ತರೀಕೆರೆಯ ಒಕ್ಕಲಿಗರ ಸಂಘದ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಲಾಯಿತು
ತರೀಕೆರೆ: ಬೆಂಗಳೂರು ನಗರ ಕಟ್ಟಿ ಸುತ್ತಮುತ್ತ ಕೆರೆ ಕಟ್ಟೆಗಳನ್ನು ನಿರ್ಮಿಸಿದ ನಾಡಪ್ರಭು ಕೆಂಪೇಗೌಡ ಅವರು ಕೇವಲ ಒಕ್ಕಲಿಗ ಸಮುದಾಯಕ್ಕೆ ಮಾತ್ರ ತಮ್ಮ ಕೆಲಸ ಸೀಮಿತಗೊಳಿಸಿಲ್ಲ. ಬದಲಾಗಿ ಎಲ್ಲಾ ಸಮಾಜದ ಜನರಿಗೂ ಅನುಕೂಲವಾಗುವಂಥ ಕಾರ್ಯಗಳನ್ನು ಮಾಡಿದ್ದಾರೆ ಎಂದು ತಾಲೂಕು ಒಕ್ಕಲಿಗರ ಸಂಘದ ಉಪಾಧ್ಯಕ್ಷ ಕೆ.ವಿ.ನಾಗೇಶ್‌ಗೌಡ ಹೇಳಿದರು.
ಪಟ್ಟಣದ ಒಕ್ಕಲಿಗರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಾನ್ ನಾಯಕ ಕೆಂಪೇಗೌಡರ ಜಯಂತಿ ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಆಚರಿಸಬೇಕು. ಶಾಲಾ ಪಠ್ಯದಲ್ಲಿ ನಾಡ ಪ್ರಭುಗಳ ಜೀವನ ಚರಿತ್ರೆ ಮುದ್ರಿಸಬೇಕು ಎಂದು ಮನವಿ ಮಾಡಿದರು. ಪ್ರಮುಖರಾದ ಟಿ.ಎಂ.ಉಮಾಶಂಕರ್, ಕೃಷ್ಣೇಗೌಡ, ಕುಮಾರಗೌಡ, ಸುಂದರೇಶ್, ಎಸ್.ಎನ್.ಹರೀಶ್ ಮತ್ತಿತರರಿದ್ದರು.