ಕಳಸದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷರಾಗಿ ಶ್ರೀಕಾಂತ್ ಕೆಳಭಾಗ ಅಧಿಕಾರ ಸ್ವೀಕರಿಸಿದರು. ಗಜೇಂದ್ರ ಕೊಟ್ಟಿಗೆಹಾರ, ದೀಪಕ್ ದೊಡ್ಡಯ್ಯ, ಎಂ.ಎ.ಶೇಷಗಿರಿ, ಗಿರೀಶ್ ಹೆಮ್ಮಕ್ಕಿ, ನಾಗೇಶ್ ಭಟ್, ಸುಜಯಾ ಸದಾನಂದ, ಕೆ.ಎ.ರಂಗನಾಥ್, ವೆಂಕಟಸುಬ್ಬಯ್ಯ, ಮೋಹನ್ ಗುಳ್ಯ ಇತರರಿದ್ದರು. 
ಚಿಕ್ಕಮಗಳೂರು

ಶೀಘ್ರದಲ್ಲೇ ಕಳಸ ಪೂರ್ಣ ತಾಲೂಕು ಕೇಂದ್ರ

ಕಳಸ: ಕೇಂದ್ರ ಸರ್ಕಾರ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡಲು ಮುಂದಾದರೂ ಅದನ್ನು ಜಾರಿಗೆ ತರಲು ಕಾಂಗ್ರೆಸ್ ಬಿಡುತ್ತಿಲ್ಲ. ಮಹಿಳೆಯರಿಗೆ ಸಿಗಬೇಕಾದ ಅಧಿಕಾರವನ್ನು ಕಾಂಗ್ರೆಸ್ ವಿರೋಧಿಸುತ್ತಿದೆ. ಇದನ್ನು ಮಹಿಳೆಯರು ಚರ್ಚಿಸಬೇಕು ಎಂದು  ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಳಸದ ಅಭಿವೃದ್ಧಿಯಲ್ಲಿ ಬಿಜೆಪಿ ಕೊಡುಗೆ ಮಹತ್ತರ. ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮತದಾರರರಿಗೆ ತಿಳಿಸಬೇಕು. ಕಳಸ ತಾಲೂಕು ಕೇಂದ್ರವಾಗಲು ಬಿಜೆಪಿಯೇ ಕಾರಣ. ಆದರೆ ಅದನ್ನು ಪೂರ್ಣ ತಾಲೂಕು ಕೇಂದ್ರವನ್ನಾಗಿ ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ. ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಶೀಘ್ರದಲ್ಲೇ ಕಳಸ ಪೂರ್ಣವಾದ ತಾಲೂಕು ಕೇಂದ್ರ ಆಗಲಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ಮಾತನಾಡಿ, ಬಿಜೆಪಿ ಕೇವಲ ರಾಜಕೀಯ ಪಕ್ಷವಾಗಿರದೆ ದೇಶ ಸೇವೆಯಲ್ಲಿ ತೊಡಗಿರುವ ಸಂಘಟನೆಯಾಗಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ದೇಶವನ್ನು ಆರ್ಥಿಕವಾಗಿ ದಿವಾಳಿ ಮಾಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಪಕ್ಷದ ಅಧ್ಯಕ್ಷರಾಗಿ ಶ್ರೀಕಾಂತ್ ಕೆಳಭಾಗ ಅಧಿಕಾರ ಸ್ವೀಕರಿಸಿದರು. ಬಿ.ಕೆ.ಮಹೇಶ್ ಬಸರಿಕಲ್ಲು, ಸುಂದರ ಶೆಟ್ಟಿ (ಪ್ರಧಾನ ಕಾರ್ಯದರ್ಶಿಗಳು), ಕುಮಾರ್, ರಮೇಶ್ ಮರಸಣಿಗೆ, ರವಿ ಕಳಕೋಡು, ರಂಗನಾಥ್ ಹಳುವಳ್ಳಿ, ಸುವರ್ಣಮ್ಮ, ಗೋಪಾಲ ಗೌಡ, ಸತೀಶ್, ವಿಜೇಂದ್ರ ನರ್ಗಲ್, ಸುರೇಶ್ (ಉಪಾಧ್ಯಕ್ಷರು), ರಾಘವೇಂದ್ರ, ನಿರಂಜನ ಶೆಟ್ಟಿ, ಸುನೀಲ್ ಹೆಮ್ಮಕ್ಕಿ, ಮೋಹನ್, ಕೇಶವಮೂರ್ತಿ, ರಾಜೇಂದ್ರ, ಪ್ರವೀಣ್ (ಕಾರ್ಯದರ್ಶಿಗಳು) ಪ್ರಸಿದ್ಧ ಜೈನ್ (ಕಳಸ ನಗರ ಘಟಕ ಅಧ್ಯಕ್ಷ), ಉಷಾ ನೆಲ್ಲಿಕೆರೆ (ಮಹಿಳಾ ಮೋರ್ಚಾ ಅಧ್ಯಕ್ಷೆ), ವಿಜಯ ಗೌಡ (ರೈತ ಮೋರ್ಚಾ ಅಧ್ಯಕ್ಷ), ವೆಂಕಟೇಶ್ (ಪ್ರಧಾನ ಕಾರ್ಯದರ್ಶಿ), ಧರ್ಮೇಂದ್ರ (ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ), ರವಿ ಯಳಂದೂರು (ಯುವ ಮೋರ್ಚಾ ಅಧ್ಯಕ್ಷ), ರವಿ ಹೊಸೂರು (ಉಪಾಧ್ಯಕ್ಷ),  ಪ್ರಥಮ್ (ಪ್ರಧಾನ ಕಾರ್ಯದರ್ಶಿ), ವಸಂತ ರಾಗಿಹಳ್ಳಿ (ಒಬಿಸಿ ಮೋರ್ಚಾ ಅಧ್ಯಕ್ಷ), ಮುತ್ತಪ್ಪ (ಎಸ್ಸಿ ಮೋರ್ಚಾ ಅಧ್ಯಕ್ಷ) ಹಾಗೂ ಎಸ್ಟಿ ಮೋರ್ಚಾ ಅಧ್ಯಕ್ಷ ಉದಯ್ ಬಿಳಗಲ್ ಅಧಿಕಾರ ಸ್ವೀಕರಿಸಿದರು.
ಮೂಡಿಗೆರೆ ಮಂಡಲ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಬಿಜೆಪಿ ಮುಖಂಡರಾದ ದೀಪಕ್ ದೊಡ್ಡಯ್ಯ, ಎಂ.ಎ.ಶೇಷಗಿರಿ, ಗಿರೀಶ್ ಹೆಮ್ಮಕ್ಕಿ, ನಾಗೇಶ್ ಭಟ್, ಸುಜಯಾ ಸದಾನಂದ, ಕೆ.ಎ.ರಂಗನಾಥ್, ವೆಂಕಟಸುಬ್ಬಯ್ಯ, ಮೋಹನ್ ಗುಳ್ಯ ಇತರರಿದ್ದರು.