ಅಜ್ಜಂಪುರ ತಾಲೂಕಿನ ಬಗ್ಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡವನ್ನು ಜಿಪಂ ಸಿಇಒ ಡಾ. ಎಚ್.ಎಸ್.ಕೀರ್ತನಾ ಉದ್ಘಾಟಿಸಿದರು. ಬಿ.ಎಸ್.ರಾಜು, ತಿಮ್ಮರಾಜು, ವಿನಾಯಕ್ ಸಾಗರ್, ಜಿ.ಎಸ್.ರಚನಾ, ಎಂ.ಕೆ.ವಿಜಯಕುಮಾರ್, ಎಚ್.ಎ.ಪರಶುರಾಮಪ್ಪ ಇತರರಿದ್ದರು.
- ಜಿಪಂ ಸಿಇಒ ಡಾ. ಎಚ್.ಎಸ್.ಕೀರ್ತನಾ ಮನವಿ
- ನೆಮ್ಮದಿ ನೀಡುವ ದೇಗುಲ
ತರೀಕೆರೆ: ಸರ್ಕಾರಿ ಶಾಲೆಗಳ ಉಳಿವು ಮತ್ತು ಉನ್ನತಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಪಂ ಸಿಇಒ ಡಾ. ಎಚ್.ಎಸ್.ಕೀರ್ತನಾ ಹೇಳಿದರು.
ಅಜ್ಜಂಪುರ ತಾಲೂಕಿನ ಬಗ್ಗವಳ್ಳಿಯಲ್ಲಿ ದೊಡ್ಡ ಸೋಮಪ್ಪ ಗ್ರಾಮೀಣ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕತಗೊಳಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳು ಮಕ್ಕಳ ಕೊರತೆ ಕಾರಣ ಬಾಗಿಲು ಮುಚ್ಚುತ್ತಿರುವ ಹೊತ್ತಿನಲ್ಲಿ ಬಗ್ಗವಳ್ಳಿ ಸರ್ಕಾರಿ ಶಾಲೆ ವಿನೂತನ ರೂಪ ಪಡೆದುಕೊಂಡಿರುವುದು ಒಳ್ಳೆಯ ಬೆಳವಣಿಗೆ. ಈ ದಿಸೆಯಲ್ಲಿ ಕೆಲಸಕ್ಕೆ ಸಹಕರಿಸಿದ ನಿವತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಅವರ ಕಾರ್ಯ ಪ್ರೇರಣಾದಾಯಕ ಎಂದರು.
ಭೂ ಸೇನೆ ನಿವತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ಮಾತನಾಡಿ, ಶ್ರದ್ಧಾ ಭಕ್ತಿ, ಆರಾಧನೆಗಾಗಿ ಮಾತ್ರವಲ್ಲ, ನೆಮ್ಮದಿ ನೀಡುವ ದೇಗುಲ ನಿರ್ಮಾಣ, ನಿರ್ವಹಣೆಗೆ ಜನ ಒತ್ತು ನೀಡುವಂತೆ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಿರುವ ಸರ್ಕಾರಿ ಶಾಲೆಗಳ ಪ್ರಗತಿಗೂ ಅಷ್ಟೇ ಆಸಕ್ತಿ ವಹಿಸಬೇಕಿದೆ ಎಂದರು.
ದಾನಿಗಳು ಬಗ್ಗವಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ತೆರೆಯಲು ಆರ್ಥಿಕ ನೆರವು ನೀಡಿದ್ದು, ಹಿರಿಯ ಪ್ರಾಥಮಿಕ ಶಾಲೆಯಲ್ಲೂ ವಿಜ್ಞಾನ ಪ್ರಯೋಗಾಲಯ ತೆರೆಯಲು ಆರ್ಥಿಕ ನೆರವು ನೀಡುವ ಭರವಸೆ ನೀಡುತ್ತಿದ್ದಾರೆ. ಸರ್ಕಾರವಷ್ಟೇ ಅಲ್ಲ, ಉದಾರ ಮನೋಭಾವ ಹೊಂದಿರುವ ಇತರ ದಾನಿಗಳಿಂದಲೂ ಅಗತ್ಯ ದೇಣಿಗೆ ಸಂಗ್ರಹಿಸಿ ಶಾಲೆಯ ಅಭ್ಯುದಯಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.
ಸಮಾರಂಭದಲ್ಲಿ ಕೆಡಿಪಿ ಸದಸ್ಯೆ ಜಿ.ಎಸ್.ರಚನಾ ಅವರು ಮಕ್ಕಳಿಗೆ ಸಾಂಕೇತಿಕವಾಗಿ ಶೂ, ಸಾಕ್ಸ್ ವಿತರಿಸಿದರು.
ತಹಸೀಲ್ದಾರ್ ವಿನಾಯಕ್ ಸಾಗರ್, ತಾಪಂ ಇಒ ಎಂ.ಕೆ.ವಿಜಯಕುಮಾರ್, ಬಿಇಒ ಎಚ್.ಎ.ಪರಶುರಾಮಪ್ಪ, ನಿವತ್ತ ವಿಜ್ಞಾನಿ ಸುರೇಂದ್ರ ಕುಲಕರ್ಣಿ, ಶಾಲಾ ಅಭಿವದ್ಧಿ ಮತ್ತು ಮೇಲ್ತುವಾರಿ ಸಮಿತಿ ಅಧ್ಯಕ್ಷ ನಾಗರಾಜ್, ಗ್ರಾಮಸ್ಥರಾದ ಪ್ರಭು, ಸುರೇಶ್, ಉಮೇಶ್, ಮಲ್ಲಿಕಾರ್ಜುನ, ಪ್ರಸನ್ನ ಮತ್ತಿತರರಿದ್ದರು.