ಬಾಳೆಹೊನ್ನೂರು ಸಮೀಪದ ಸಂಗಮೇಶ್ವರಪೇಟೆಯಲ್ಲಿ ಆಯೋಜಿಸಿದ್ದ ಮಧುಮಗಳ ಶೃಂಗಾರ ತರಬೇತಿ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಸಂಪತ್ ಮಾತನಾಡಿದರು. ವಿದ್ಯಾ ಪ್ರಶಾಂತ್, ಭಾರತಿ, ದೇವರಾಜ್, ಪಲ್ಲವಿ, ಸುಜಾತಾ ಇದ್ದರು.
ಬಾಳೆಹೊನ್ನೂರು: ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಕಾರ್ಯಕ್ರಮ ಪೂರಕ ಎಂದು ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್ ಹೇಳಿದರು.
ಖಾಂಡ್ಯ ವಲಯದ ಸಂಗಮೇಶ್ವರ ಪೇಟೆಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಆಯೋಜಿಸಿದ್ದ ಮಧುಮಗಳ ಶೃಂಗಾರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರು ಸ್ವಾವಲಂಬನೆ ಸಾಧಿಸಲು ಉತ್ತಮ ವೇದಿಕೆ ದೊರೆತಿದ್ದು, ಇದರಲ್ಲಿ ಸಕ್ರಿಯವಾಗಿ ಸದಸ್ಯರಾಗಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕಡಬಗೆರೆ ವೈದ್ಯೆ ವಿದ್ಯಾ ಪ್ರಶಾಂತ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಿಗೆ ಉತ್ತಮ ವೇದಿಕೆ ಒದಗಿಸಿದೆ. ಹಲವು ಕಾರ್ಯಗಳ ಮೂಲಕ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಯೋಜನೆ ಅಡಿಪಾಯ ಹಾಕಿಕೊಟ್ಟಿದೆ. ಸಾವಿರಾರು ಮಹಿಳೆಯರು ಆರ್ಥಿಕ ಸ್ವಾವಲಂಬನೆ ಕಂಡುಕೊಂಡು ಯಶಸ್ವಿಯಾಗಿದ್ದಾರೆ ಎಂದರು.
ಜ್ಞಾನವಿಕಾಸ ಯೋಜನೆ ಸಮನ್ವಯಾಧಿಕಾರಿ ಭಾರತಿ, ವಲಯ ಮೇಲ್ವಿಚಾರಕ ದೇವರಾಜ್, ಪಿಎಸಿಎಸ್ ನಿರ್ದೇಶಕಿ ಪಲ್ಲವಿ, ಪಿಡಿಒ ಸುಜಾತಾ, ಗ್ರಾಪಂ ಸದಸ್ಯ ನಾಬರ್ಟ್ ಪಿಂಟೋ, ತರಬೇತಿ ಶಿಕ್ಷಕಿ ಚಿತ್ರಾ, ಒಕ್ಕೂಟದ ಅಧ್ಯಕ್ಷೆ ರೇಖಾ, ಸೇವಾಪ್ರತಿನಿಧಿಗಳಾದ ಪುಷ್ಪಾ, ನಂದಿತಾ, ಸಿಂಚನಾ, ಸಾಜಿಯಾ ಬಾನು ಇತರರಿದ್ದರು.