ಮೂಡಿಗೆರೆಯಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬೇರುಗಂಡಿ ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಡಾ.ಮೋಹನ ರಾಜಣ್ಣ, ರಾಜಲಕ್ಷ್ಮಿ ಕಾಂತರಾಜ್ ಇತರರಿದ್ದರು.
ಮೂಡಿಗೆರೆ: ಭಾರತೀಯ ಸನಾತನ ಧರ್ಮ ಮತ್ತು ವೀರಶೈವ ಸಿದ್ದಾಂತದ ಇತಿಹಾಸದಲ್ಲಿ ಜಗದ್ಗುರು ರೇಣುಕಾ ಶಿವಾಚಾರ್ಯರ ಹೆಸರು ಅಜರಾಮರವಾಗಿದೆ. ಸಿದ್ದಾಂತ ಶಿಖಾಮಣಿ ಎಂಬ ಪವಿತ್ರ ಗ್ರಂಥದ ಮೂಲಕ ಮಾನವ ಕುಲಕ್ಕೆ ಧರ್ಮದ ಸಾರವನ್ನು ತಿಳಿಸಿಕೊಟ್ಟ ಅವರನ್ನು ರೇಣುಕಾ ಭಾಗವತ್ಪಾದರು ಎಂದು ಭಕ್ತಿಯಿಂದ ಕರೆಯಲಾಗುತ್ತದೆ ಎಂದು ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮಿಜಿ ಹೇಳಿದರು.
ಪಟ್ಟಣದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರ ಹಾಗೂ ಜಗದ್ಗುರು ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರು ಮಹಾನ್ ಸಂತರ ಭಾವಚಿತ್ರಕ್ಕೆ ಪುಷ್ಪರ್ಚನೆ ನೆರವೇರಿಸಿ ಮಾತನಾಡಿ, ಅನುಭವ ಮಂಟಪ ಪ್ರಜಾಪ್ರಭುತ್ವದ ಮೊದಲ ಹೆಜ್ಜೆಯಾಗಿದೆ. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪವ ವಿಶ್ವದ ಮೊದಲ ಸಂಸತ್ತು ಎನ್ನುಬಹುದು. ಕಾಯಕವೆ ಕೈಲಾಸ, ಪ್ರತಿಯೊಬ್ಬರೂ ನಿರ್ವಹಿಸುವ ಕೆಲಸವೇ ದೇವರು, ಕೆಲಸದಲ್ಲಿ ಯಾವುದೇ ಮೇಲು ಕೀಳು ಎಂಬ ಹುಳುಕು ಹುಡುಕುವುದು ಸರಿಯಲ್ಲ. ಶ್ರದ್ಧೆಯಿಂದ ಮಾಡುವ ಕಾಯಕವೆ ಮೋಕ್ಷಕ್ಕೆ ದಾರಿಯಾಗಿದೆ ಎಂದರು.
ಕಾಯಕದಿಂದ ಬಂದಗಳಿಕೆಯಲ್ಲಿ ಒಂದು ಭಾಗವನ್ನು ತೆಗೆದಿಟ್ಟು ಸಮಾಜದ ಹಸಿದವರಿಗಾಗಿ ದಾಸೋಹದ ರೂಪದಲ್ಲಿ ಮಿಸಲಿಡುವುದು ಮಾನವರ ಹುಟ್ಟುಗುಣವಾಗಬೇಕಾಗಿದೆ. ಇದನ್ನು ಬಸವಣ್ಣನವರು ಪ್ರತಿಪಾದಿಸಿದ್ದಾರೆ. ಸಮಾಜ ಸೇವೆ, ಅನ್ನದಾಸೋಹ, ಶೈಕ್ಷಣಿಕ ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ನೀಡುವ ದಾನಧರ್ಮ ಪ್ರತಿಯೊಬ್ಬನನ್ನು ಉತ್ತುಂಗಕ್ಕೆ ಏರಿಸಬಲ್ಲದು. ತನ್ನ ಅಂತರಂಗದಲ್ಲಿ ಶಿವನ ಧ್ಯಾನ ಮಾಡಿದರೆ ಜೀವನದುದ್ದಕ್ಕೂ ಮತ್ತು ನಂತರವೂ ಮುಕ್ತಿ ಪಡೆಯಬುಹುದು ಎಂದು ತಿಳಿಸಿದರು.
ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರಾಜಾಲಕ್ಷ್ಮೀ ಕಾಂತರಾಜ್, ಮಹಾಂತಿನ ಮಠದ ಪುರೋಹಿತ ಸಂಗಮೇಶ ಶಾಸ್ತಿ ಇತರರಿದ್ದರು.