ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಕಾಡುಕೋಣಗಳ ಸೆರೆಗೆ ಅಗತ್ಯ ಕ್ರಮ ಕೈಗೊಂಡಿರುವ ಅರಣ್ಯ ಇಲಾಖೆ ಸಿಬ್ಬಂದಿ.
- ಕಾಡುಕೋಣಗಳನ್ನು ಹಿಡಿದು ಸ್ಥಳಾಂತರ
- ಕಾಡಾನೆಗಳ ಸೆರೆಯಲ್ಲಿ ಕರ್ನಾಟಕ ಮೊದಲ ಸ್ಥಾನ
ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿ ಎಷ್ಟಿದೆಯೋ ಅದಕ್ಕಿಂತಲೂ ಅತಿ ಹೆಚ್ಚು ಹಾವಳಿ ಇರುವುದು ಕಾಡು ಎಮ್ಮೆ ಹಾಗೂ ಕೋಣಗಳದ್ದು. ಇದೀಗ ಅರಣ್ಯ ಇಲಾಖೆ ಕಾಡುಕೋಣಗಳನ್ನು ಹಿಡಿದು ಸ್ಥಳಾಂತರ ಮಾಡಲು ನಿರ್ಧರಿಸಿದೆ. ಇದು ಎಷ್ಟರಮಟ್ಟಿಗೆ ಕಾರ್ಯ ಸಾಧು ಎನ್ನುವುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಕಾಡಾನೆಗಳ ಸೆರೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆದರೆ ಇದೀಗ ಕಾಡುಕೋಣಗಳನ್ನು ಹಿಡಿಯುವುದು ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಕಾಡುಕೋಣಗಳು ಮಲೆನಾಡಿನಲ್ಲಿ ಸರ್ವೆ ಸಾಮಾನ್ಯ ಎನ್ನುವಂತಿವೆ. ಕಾಡುಕೋಣಗಳ ಗಣತಿ ದೇಶದ ಇತಿಹಾಸದಲ್ಲಿ ಇದುವರೆಗೆ ನಡೆದೇ ಇಲ್ಲ. ಹೀಗಿರುವಾಗ ಕಾಡುಕೋಣಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುತ್ತೇವೆ ಎಂಬ ಮೂರ್ಖತನದ ನಿರ್ಧಾರವನ್ನು ಅರಣ್ಯ ಇಲಾಖೆ ಕೈಗೊಂಡತಿದೆ.
ಪಶ್ಚಿಮಘಟ್ಟ ವ್ಯಾಪ್ತಿಯ ಪ್ರತಿ ಊರಿನಲ್ಲಿಯೂ ಕಾಡು ಕೋಣಗಳು ಕಾಣಿಸಿಕೊಳ್ಳುವುದು ಸಹಜ. ಕೆಲವೆಡೆ ಕಾಡುಕೋಣಗಳ ಹಾವಳಿ ಅತಿಹೆಚ್ಚಿದೆ. ಆದರೆ ಕಾಡು ಪೂರ್ಣಗಳನ್ನು ಸೆರೆಹಿಡಿದು ಎಲ್ಲಿಗೆ ಬಿಡುತ್ತಾರೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಆನೆಗಳ ವಿಷಯಕ್ಕೆ ಬಂದರೆ ಆನೆಗಣತಿ ನಡೆಯುತ್ತದೆ. ಆನೆಗಳ ಲೆಕ್ಕ ಅರಣ್ಯ ಇಲಾಖೆಗೆ ಒಂದಷ್ಟು ಸರಿಯಾಗಿ ಸಿಗುತ್ತದೆ. ಆದರೆ ಕಾಡು ಕೋಣಗಳ ಬಗ್ಗೆ ಮಾತ್ರ ಯಾವುದೇ ಮಾಹಿತಿ ಅರಣ್ಯ ಇಲಾಖೆ ಬಳಿ ಇಲ್ಲ.
ಹಿಡಿದ ಕಾಡುಕೋಣಗಳನ್ನು ಬಿಡುವುದು ಎಲ್ಲಿ
ಅರಣ್ಯ ಇಲಾಖೆ ಕಾಡುಕೋಣಗಳನ್ನು ಸೆರೆಹಿಡಿದು ಸಳನ್ತರ ಮಾಡುವುದಾಗಿ ಘೋಷಣೆ ಮಾಡಿದೆ. ಆದರೆ ಸರಿ ಹಿಡಿದ ಕಾಡುಕೋಣಗಳನ್ನು ಜೆಲ್ಲಿ ಬಿಡುತ್ತಾರೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಕಾಡುಕೋಣಗಳ ಸಂತತಿ ನಿರೀಕ್ಷೆಗೂ ಮೀರಿ ಜಾಸ್ತಿಯಾಗಿದೆ. ಇರುವ ಕಾಡುಗಳಲ್ಲಿಯೇ ಅತಿ ಹೆಚ್ಚು ಕಾಡುಕೋಣಗಳು ವಾಸ್ತವ್ಯ ಹೊಂದಿವೆ. ಇದಲ್ಲದೆ ಅರಣ್ಯದಂಚಿನ ಕಾಫಿ ತೋಟಗಳು ಹಾಗೂ ಅಡಿಕೆ ತೋಟಗಳೇ ಅವುಗಳ ಆವಾಸಸ್ಥಾನವಾಗಿವೆ. ಇಂಥ ಕಾಡುಕೋಣಗಳನ್ನು ಸೆರೆಹಿಡಿದು ಎಲ್ಲಿಗೆ ಬಿಡುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು ಎನ್ನುವುದು ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ವಾಸ್ತವವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಟಿಗಳ ಸ್ಥಳಾಂತರ ಕಾರ್ಯ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಒಂದು ವೇಳೆ ನೂರಾರು ಕಾಟಿಗಳನ್ನು ಸೆರೆಹಿಡಿದರೆ ಅವುಗಳನ್ನು ಭದ್ರ ಅಭಯಾರಣ್ಯದಲ್ಲಿ ಬಿಡುತ್ತಾರೆಯೋ ಅಥವಾ ಬೇರೆ ಅರಣ್ಯ ಪ್ರದೇಶದಲ್ಲಿ ಬಿಡುತ್ತಾರೆಯೋ ಎನ್ನುವ ಪ್ರಶ್ನೆಯು ಮೂಡಿದೆ.
ಭದ್ರಾದಲ್ಲಿ ಇಲ್ಲ ಅವಕಾಶ ಭದ್ರಾ ಅಭಯಾರಣ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಮುಂಜಾಗ್ರತ ಕ್ರಮದಿಂದಾಗಿ ಪ್ರಾಣಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಹುಲಿಗಳ ಸಂಖ್ಯೆಯು ನಿರೀಕ್ಷೆಗೆ ಮೀರಿ ಹೆಚ್ಚಿದ್ದು, ಇದಲ್ಲದೆ ದೊಡ್ಡ ಪ್ರಾಣಿಗಳಾದ ಆನೆ ಹಾಗೂ ಕಾಡುಕೋಣಗಳ ಸಂಖ್ಯೆಯು ಹೆಚ್ಚಳವಾಗಿದೆ. ಹೀಗಿರುವಾಗ ಮಲೆನಾಡಿನಲ್ಲಿ ಸೆರೆಹಿಡಿದ ಕಾಡುಕೋಣಗಳನ್ನು ಭದ್ರ ಅಭಯಾರಣ್ಯಕ್ಕೆ ಬಿಡಲಾಗುತ್ತದೆಯೇ ಎನ್ನುವ ಪ್ರಶ್ನೆಯೂ ಮೂಡಿದೆ.
ಒಂದು ವೇಳೆ ಮಳೆ ಭಾಗದ ಕಾಟಿಗಳನ್ನು ಸೆರೆಹಿಡಿದರೆ ಎಲ್ಲಿಗೆ ಬಿಡುತ್ತಾರೆ. ಇದುವರೆಗೆ ಕಾಟಿ ಸೆರೆ ಕಾರ್ಯಾಚರಣೆ ಎಲ್ಲಿಯೂ ನಡೆದಿಲ್ಲ. ಇದರ ಮಧ್ಯೆ ಚಿಕ್ಕಮಗಳೂರು ಅರಣ್ಯ ಇಲಾಖೆ ದೊಡ್ಡ ಸಮಸ್ಯೆ ಮೈಮೇಲೆ ಎಳೆದುಕೊಂಡAತಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡುಕೋಣಗಳ ಸೆರೆಗೆ ಮಾಕ್ ಡ್ರಿಲ್ ಆರಂಭಗೊAಡಿದೆ. ಕಳೆದ ಎರಡು ದಿನಗಳಿಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಆರು ಮಂದಿ ವೈದ್ಯರು ಕೊಪ್ಪ ವಿಭಾಗದಲ್ಲಿ ಮಾಕ್ ಡ್ರಿಲ್ ನಡೆಸುತ್ತಿದ್ದಾರೆ. ಕಾಡುಕೋಣಗಳಿಗೆ ಹೇಗೆ ಅರವಳಿಕೆ ನೀಡಬೇಕು? ಅರವಳಿಕೆ ಮದ್ದು ತಗುಲಿದ ಬಳಿಕ ಕಾಡುಕೋಣಗಳನ್ನು ಹೇಗೆ ಸ್ಥಳಾಂತರ ಮಾಡಬೇಕು ಎಂಬ ಬಗ್ಗೆ ಮಾಕ್ ಡ್ರಿಲ್ ಕಳೆದ ಎರಡು ದಿನದಿಂದ ನಡೆದಿದೆ.
ಕಾಟಿ ಕಾರ್ಯಾಚರಣೆಗೆ ಎರಡು ಆನೆಗಳನ್ನು ಬಳಸಿಕೊಳ್ಳಲಾಗಿದೆ. ಈ ಎರಡು ಆನೆಗಳು ಇಬ್ಬರು ಪಶು ವೈದ್ಯರನ್ನು ಹೊತ್ತು ಕಾಟಿಗಳಿಗೆ ಅರವಳಿಕೆ ನೀಡಲು ಬಳಸಿಕೊಳ್ಳಲಾಗುತ್ತದೆ.
ಈ ಕಾರ್ಯಾಚರಣೆಯಲ್ಲಿ ಆರು ಮಂದಿ ವೈದ್ಯರು ಕಾರ್ಯಾಚರಣೆ ನಡೆಲಿದ್ದು, ಇದರಲ್ಲಿ ಇಬ್ಬರು ವೈದ್ಯರು ಕಾಟಿಗಳಿಗೆ ಅರವಳಿಕೆ ನೀಡಲು ಮುಂದಾದರೆ ಇನ್ನುಳಿದ ನಾಲ್ವರು ವೈದ್ಯರು ಅರವಳಿಕೆ ನೀಡಿದ ಕಾಟಿಗಳಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಿದ್ದಾರೆ.