ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ 
ಚಿಕ್ಕಮಗಳೂರು

ಮನೆಹಾಳು ಕೆಲಸಕ್ಕೆ ಸಾಧನಾ ಸಮಾವೇಶವೇ?

ನಿತ್ಯಾನಂದ ಎಸ್.ಎನ್.

ಪ್ರಮುಖ ಮುಖ್ಯಾಂಶಗಳು

  • ಶಾಲಾ ಮಕ್ಕಳ ಮನಸ್ಸಿನಲ್ಲಿ ಮತಿಯ ವಿಷ ಬೀಜ ಬಿತ್ತುವುದು ಕಾಂಗ್ರೆಸ್ ಸರ್ಕಾರದ ಸಾಧನೆಯೇ?
  • ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಕ್ರೋಶ
ಚಿಕ್ಕಮಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ದುಡ್ಡು ತಿಂದಿದ್ದು, ಎಸ್ ಸಿಪಿ ಎಸ್ ಟಿಪಿ ಅನುದಾನ ದುರ್ಬಳಕೆ, ಕಾರ್ಮಿಕ ಇಲಾಖೆಯಲ್ಲಿ ದುಡ್ಡು ಹೊಡೆದಿದ್ದು, ಶಾಲಾ ಮಕ್ಕಳ ಮನಸ್ಸಿನಲ್ಲಿ ಮತಿಯ ವಿಷ ಬೀಜ ಬಿತ್ತುವುದು ಕಾಂಗ್ರೆಸ್ ಸರ್ಕಾರದ ಸಾಧನೆಯೇ? ಇದೆಲ್ಲವೂ ಮನೆಹಾಳು ಕೆಲಸ. ಇದಕ್ಕೆ ಸಾಧನ ಸಮಾವೇಶ ಎಂದು ಕರೆದರೆ ಅದನ್ನು ಮನೆಹಾಳರು ಮಾತ್ರ ಒಪ್ಪಿಕೊಳ್ಳಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಸಾಧನಾ ಸಮಾವೇಶ ಮಾಡಲು ಮುಂದಾಗಿದೆ. ಸಮಾವೇಶ ಮಾಡುವ ಮೊದಲು ತಾವು ಏನು ಸಾಧನೆ ಮಾಡಿz್ದೆÃವೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಬೋರ್ವೆಲ್ ಕೊರೆಯಿಸಲು ಹಣ ನೀಡಿಲ್ಲ. ಗೃಹಲಕ್ಷ್ಮಿ ಹಣವನ್ನು ೧೦ ತಿಂಗಳು ನೀಡಿ ಎರಡು ತಿಂಗಳ ಹಣ ನುಂಗಿದ್ದಾರೆ. ಈ ಬಗ್ಗೆ ವಿಧಾನಸೌಧದಲ್ಲೇ ಪ್ರಶ್ನೆ ಮಾಡಿದರೂ ಉತ್ತರ ನೀಡಿಲ್ಲ. ಈ ಸರ್ಕಾರ ಮಾಡಿರುವುದು ಲೂಟಿ ಹಾಗೂ ಅಧಿಕಾರ ದುರ್ಬಳಕೆ. ಇದಾವುದೂ ಸಾಧನೆಯಾಗಲು ಸಾಧ್ಯವಿಲ್ಲ ಎಂದರು.
ಬಡವರಿಗೆ ಎಷ್ಟು ಗೃಹ ಭಾಗ್ಯ ನೀಡಿz್ದÉÃವೆ. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಎಷ್ಟು ಮನೆ ನೀಡಿz್ದÉÃವೆ. ರಾಜ್ಯದಲ್ಲಿ ಯಾವ ನೀರಾವರಿ ಯೋಜನೆ ಪೂರ್ಣಗೊಳಿಸಿz್ದÉÃವೆ. ಉದ್ಯೋಗ ಸೃಷ್ಟಿ ಮಾಡುವ ಯಾವ ಯೋಜನೆ ಮಾಡಿz್ದÉÃವೆ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಟೀಕಿಸುವ ಗುಣಪಡಿಸಲಾಗದ ರೋಗವಿದೆ. ಈ ರೋಗವನ್ನು ನಿರ್ಲಕ್ಷ ಮಾಡುವುದೇ ಸೂಕ್ತ. ಈ ರೋಗಕ್ಕೆ ಪ್ರತಿಕ್ರಿಯಿಸಿದಷ್ಟು ಅದು ಕೆರಳುತ್ತದೆ. ಆದರ ಬದಲು ನಿರ್ಲಕ್ಷö್ಯ ಮಾಡಿದರೆ ರೋಗ ಶಮನವಾಗುತ್ತದೆ ಎಂದು ಲೇವಡಿ ಮಾಡಿದರು.