ಕಡೂರು ತಾಲೂಕಿನ ಸರಸ್ವತಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವ್ಯವಹಾರ ನಡೆಸಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ರುದ್ರೇಗೌಡ, ರಂಗಸ್ವಾಮಿ, ಕುಶಾಲಗೌಡ, ತಮಟೇಗೌಡ, ಸಂತೋಷ್, ಎಸ್.ಸಿ.ಗೋಪಾಲಕೃಷ್ಣ, ಎನ್. ಲಕ್ಷ್ಮೀದೇವಿ, ಶೋಭಾ, ವಸಂತಾ ಮತ್ತಿತರಿದ್ದರು. 
ಚಿಕ್ಕಮಗಳೂರು

ಶಾಲೆ ಅವ್ಯವಹಾರದ ತನಿಖೆ ನಡೆಸಿ

ಜಿ. ಗಜೇಂದ್ರ
ಕಡೂರು: ತಾಲೂಕಿನ ಸರಸ್ವತಿಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿರ್ವಹಣೆಯಲ್ಲಿ ಪ್ರಭಾರ ಮುಖ್ಯಶಿಕ್ಷಕಿ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ಶಾಲೆಯ ಪಾಲಕರು ಮತ್ತು ಗ್ರಾಮಸ್ಥರ ಸೋಮವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಮುಖಂಡ ಎಸ್.ಎಲ್.ಮಂಜಪ್ಪ ಮಾತನಾಡಿ, ಗ್ರಾಮದ ಶಾಲೆಯಲ್ಲಿ ಈ ಹಿಂದೆ 2016ರಿಂದ ಪ್ರಭಾರ ಮುಖ್ಯಶಿಕ್ಷಕಿಯಾಗಿ ಶಶಿಕಲಾ ಅಧಿಕಾರವಹಿಸಿಕೊಂಡ ಬಳಿಕ 2024ರವರೆಗೂ ಅವರ ಕಾರ್ಯನಿರ್ವಹಣೆ ಬಗ್ಗೆ ಗ್ರಾಮದಲ್ಲಿ ಅಸಮಾಧಾನವಿದೆ. ಶಾಲೆಯ ಎಸ್‌ಡಿಎಂಸಿ ಸಮಿತಿಯ ಅನುಮತಿ ಪಡೆಯದೆ ಕೇವಲ ನಾಲ್ಕೈದು ಸದಸ್ಯರೊಡನೆ ಸೇರಿ ಹಲವಾರು ಬಾರಿ ಶಾಲೆಯ ಎಸ್‌ಡಿಎಂಸಿ ಮತ್ತು ಇತರ ಅನುದಾನದ ಬಳಕೆಯಲ್ಲಿ ವಹಿವಾಟು ನಡೆಸಿ ಹಣವನ್ನು ಡ್ರಾ ಮಾಡಿದ್ದಾರೆ. ಶಾಲೆಯ ನಗದು ಪುಸ್ತಕಕ್ಕೂ ಬ್ಯಾಂಕ್ ಖಾತೆ ಪುಸ್ತಕಕ್ಕೂ ತಾಳೆ ಯಾಗುತ್ತಿಲ್ಲ ಎಂದು ಆರೋಪಿಸಿದರು.