ಮೂಡಿಗೆರೆ ಬಿಜೆಪಿ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಯಿತು. ಸಿದ್ದಯ್ಯ,ಹಳೆಕೋಟೆ ಮನೋಜ್, ಪ್ರಶಾಂತ್, ಧನಿಕ್, ನಯನ ತಳವಾರ, ಪರೀಕ್ಷಿತ್ ಜಾವಳಿ ಇತರರಿದ್ದರು. 
ಚಿಕ್ಕಮಗಳೂರು

ವಿಶ್ವಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವ್ಯಕ್ತಿತ್ವ ಪರಿಚಯಿಸಿ

ಮೂಡಿಗೆರೆ: ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅವರ ಜನ್ಮದಿನಾಚರಣೆಗೆ ಮಾತ್ರ ಸೀಮಿತಗೊಳಿಸದೇ ವಿಶ್ವಕ್ಕೆ ಅವರ ವ್ಯಕ್ತಿತ್ವವನ್ನು ಪರಿಚಯಿಸಬೇಕು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್‌ತಿಳಿಸಿದರು.
ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಭಾರತದ ಗೌರವವಾಗಿದ್ದು, ಭವಿಷ್ಯದಲ್ಲಿ ಭಾರತವನ್ನು ವಿಶ್ವ ಗುರುವನ್ನಾಗಿಸುವುದು ಅಂಬೇಡ್ಕರ್ ಉದ್ದೇಶವಾಗಿತ್ತು. ಆ ಕಾರಣದಿಂದ ವಿಶ್ವಗ್ರಂಥ ಸಂವಿಧಾನವನ್ನು ಭಾರತೀಯರಿಗೆ ನೀಡಿದ್ದಾರೆ. ಅವರು ಯಾವುದೇ ಜಾತಿಗೆ ಸಿಮಿತವಾಗದೆ ವಿಶ್ವ ಮಾನವರಾಗಿದ್ದಾರೆ.
ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಅಂಬೇಡ್ಕರ್ ಅವರ ಹುಟ್ಟುಸ್ಥಳ, ಸಮಾದಿ ಸ್ಥಳ, ಅವರು ಬೆಳೆದಿದ್ದು, ಓದಿದ ಗ್ರಂಥಾಲಯ ಸೇರಿದಂತೆ ಎಲ್ಲವನ್ನು ಅಭಿವೃದ್ಧಿಪಡಿಸಿದ್ದು ಬಿಜೆಪಿ ಸರ್ಕಾರ ಅವರಿಗೆ ಕೊಡುತ್ತಿರುವ ಗೌರವವಾಗಿದೆ. ಅವರ. ಮಾರ್ಗದರ್ಶನದಲ್ಲಿ ಒಂದಷ್ಟು ಒದಿಕೊಂಡು ಎಳ್ಳಷ್ಟನ್ನಾದರು ಪಾಲಿಸೋಣ ಎಂದರು.
ಬಿಜೆಪಿ ಮುಖಂಡ ಸಿದ್ದಯ್ಯ ಮಾತನಾಡಿ, ದೇಶಕ್ಕೆ ಸಂವಿಧಾನ ನೀಡಿದ ಹಕ್ಕನ್ನು ಅಂಬೇಡ್ಕರ್ ಅವರಿಂದ ಕಸಿದುಕೊಳ್ಳುವ ಮೂಲಕ ಚುನಾವಣೆಯಲ್ಲಿ ಸೋಲಿಸಿ ಮಂತ್ರಿಯಾಗಲು ಅವರು ಬಿಡಲಿಲ್ಲ. ಅವರ ಹೆಸನ್ನು ಭವಿಷ್ಯದಲ್ಲಿ ಅಳಿಸುವ ಕೆಲಸ ಮಾಡಲು ಕಾಂಗ್ರೆಸ್ ಮುಂದಾಗಿದೆ. ಭೀಮ್ ಜಿ ವ್ಯಕ್ತಿತ್ವಕ್ಕೆ ವಂಚನೆ ಮಾಡಲಾಗಿದೆ. ಅದರೆ ಬಿಜೆಪಿ ಅವರಿಗೆ ಭಾರತ ರತ್ನ ನೀಡಿ ಗೌರವಿಸಿದೆ ಎಂದರು.
ಜಿಪಂ ದಿಶಾ ಸಮಿತಿ ಸದಸ್ಯ ಹಳೆಕೋಟೆ ಮನೋಜ್, ಪ್ರಶಾಂತ್ ಧನಿಕ್, ನಯನ ತಳವಾರ, ಪರೀಕ್ಷಿತ್ ಜಾವಳಿ, ಸಚಿನ್ ಬಾನಳ್ಳಿ, ಕಾಮಾಕ್ಷಿ, ಕೊಣಗೆರೆ ಸುಂದರೇಶ್, ರವಿ ಒಡೆಯರ್, ಸಂದೀಪ್, ಭರತ್, ಸುಜಿತ್, ಪ್ರಶಾಂತ್ ,ಶಿವಣ್ಣ, ರತನ್, ತಾರೇಶ್, ಸಂಜೀವ್ ಪ್ರಸಾದ್, ಪ್ರಕಾಶ್ , ರಘು, ಶರತ್ ಇತರರಿದ್ದರು.