ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಲೋಕೇಶಪ್ಪ ಅವರನ್ನು ಗೌರವಿಸಲಾಯಿತು.
ಆಲ್ದೂರು: ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ, ಜನ ನೆಲದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಂ.ಲೋಕೇಶಪ್ಪ ಹೇಳಿದರು.
ಪಟ್ಟಣದ ವ್ಯವಸಾಯ ಸೇವಾ ಸಹಕಾರ ಸಂಘದ ಕಟ್ಟಡದಲ್ಲಿ ಕಸಾಪ ಹಮ್ಮಿಕೊಂಡಿದ್ದ 112ನೇ ಕನ್ನಡ ಸಂಸ್ಥಾಪನಾ ದಿನಾಚರಣೆ ಹಾಗೂ ಸಾವಿರ ಸದಸ್ಯತ್ವ ಚಾಲನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1915ರಲ್ಲಿ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಇಂದು 112ನೇ ಸಂಸ್ಥಾಪನಾ ದಿನಾಚರಣೆ ಆಚರಿಸಿಕೊಳ್ಳುತ್ತಿದೆ. ನಾಡು, ನುಡಿ ಶ್ರೀಮಂತಗೊಳ್ಳಲು ನಿರಂತರವಾಗಿ ಶ್ರಮಿಸುತ್ತಿದ್ದು, ಆಲೂರು ವೆಂಕಟರಾಯರು, ಸುಬ್ಬಣ್ಣ ಸೇರಿದಂತೆ ಹಲವರ ನಿರಂತರ ಶ್ರಮದಿಂದ ಕನ್ನಡ ಶ್ರೀಮಂತಗೊಂಡಿದೆ. ಆದರೆ ಪ್ರಸ್ತುತ ಯುವಕರು ಕನ್ನಡದ ಬೇರುಗಳನ್ನು ಪಸರಿಸಲು ಹಿಂದೇಟು ಹಾಕುತ್ತಿದ್ದಾರೆ. ಕನ್ನಡವನ್ನು ಉಳಿಸುವ ಮೂಲಕ ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸಬೇಕಿದೆ ಎಂದರು.
ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುವೇಶ್ ಮಾತನಾಡಿ, ಕನ್ನದ ಉಳಿವಿಗಾಗಿ ಕುವೆಂಪು, ದ.ರಾ.ಬೇಂದ್ರ ಅವರು ತಮ್ಮದೇ ಕೊಡುಗೆೆಗಳನ್ನು ನೀಡಿದ್ದಾರೆ. ಹೋಬಳಿ ಅಧ್ಯಕ್ಷ ನೂರ್ ಅಹಮದ್ ಅವರ ಕುಟುಂಬ ಸೇವೆ ಮೂಲಕ ಸಂಘಟನೆ ಗಟ್ಟಿಗೊಳಿಸುತ್ತಿದೆ ಈ ಹಿಂದೆ ಕಸಾಪದಿಂದ ಪಟ್ಟಣದಲ್ಲಿ ಹಲವಾರು ಕಾರ್ಯಗಳು ನಡೆದಿವೆ ಎಂದರು.
ಹೋಬಳಿ ಅಧ್ಯಕ್ಷ ಎಚ್.ಜೆ.ನೂರ್‌ಮಹಮ್ಮದ್ ಮಾತನಾಡಿ, ಪಟ್ಟಣದಲ್ಲಿ ಕಸಾಪ ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರಾಗಿ ಹಲವು ವರ್ಷಗಳು ಕಳೆದಿವೆ. ಇದರ ದಾಖಲೆಗಳನ್ನು ಚಿಕ್ಕಮಗಳೂರು ತಹಸೀಲ್ದಾರ್ ಅವರಿಗೆ ಕಳುಹಿಸಬೇಕಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಪಂಗೆ ಅರ್ಜಿಸಲ್ಲಿಸಿ 5 ತಿಂಗಳು ಕಳೆದಿದ್ದರೂ ಅಭಿವೃದ್ಧಿ ಅಧಿಕಾರಿ ಸಹಕಾರ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳಾ ಘಟಕದ ಹೋಬಳಿ ಅಧ್ಯಕ್ಷ ನಿರ್ಮಲಾ ಲಕ್ಷ್ಮಣ್‌ಗೌಡ, ಕಾರ್ಯದರ್ಶಿ ಜಯಾ ಹೂವೇಗೌಡ, ಪ್ರಧಾನ ಕಾರ್ಯದರ್ಶಿ ತಮನ್ನಾ , ಕೋಶಾಧ್ಯಕ್ಷ ಸಿದ್ದಾರ್ಥ್, ಸಂಘಟನಾ ಕಾರ್ಯದರ್ಶಿ ಡಿ.ಬಿ.ಈಶ್ವರ್ , ಹರೀಶ್ ಮತಿತ್ತರರಿದ್ದರು.