ಗಿರಿಯಾಪುರದ ಶ್ರೀ ಗುರು ಕೃಪಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಸೂರಿ ಶ್ರೀನಿವಾಸ್ ಉದ್ಘಾಟಿಸಿದರು.  
ಚಿಕ್ಕಮಗಳೂರು

ಯುವ ಪೀಳಿಗೆಗೆ ಜನಪದ ಸಂಸ್ಕೃತಿ ಪರಿಚಯಿಸಿ

ಕಡೂರು: ಜನಪದ ಸಂಸ್ಕೃತಿ ಎಂಬುದು ನಮ್ಮ ಸಂಸ್ಕೃತಿಯ ತಾಯಿ ಬೇರು. ಅದಿಲ್ಲದೆ ಯಾವುದೇ ಸಂಸ್ಕೃತಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಗಿರಿಯಾಪುರದ ಶ್ರೀ ಗುರು ಕೃಪಾ ಪ್ರೌಢಶಾಲೆಯಲ್ಲಿ ಕಸಾಪ ಹಿರೇನಲ್ಲೂರು ಹೋಬಳಿ ಘಟಕ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ನೆಲದ ಸಂಸ್ಕೃತಿ ಉಳಿಸಿ ಬೆಳೆಸುವ ಮೂಲಕ ನವ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಜನಪದ ಸಾಹಿತ್ಯ ಅಳಿವಿನ ಅಂಚಿಗೆ ತಲುಪುತ್ತಿದ್ದು, ಹೊಸ ತಲೆಮಾರಿಗೆ ಅದನ್ನು ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದರು.
ಅಜ್ಜಂಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಚ್.ಆರ್.ಚಂದ್ರಪ್ಪ ಜಾನಪದ ಮತ್ತು ಸಂಸ್ಕೃತಿ ವಿಷಯ ಕುರಿತು ಉಪನ್ಯಾಸ ನೀಡಿದರು. ಗುರುಕೃಪಾ ಪ್ರೌಢಶಾಲೆ ಅಧ್ಯಕ್ಷ ಸತೀಶ್,ಹಿರೇನಲ್ಲೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಜಿ.ಆರ್ ಶಿವಲಿಂಗಸ್ವಾಮಿ, ಗಿರಿಯಾಪುರದ ಸಿಎಸ್‌ಕೆ ಹಾಸ್ಟೆಲ್ ಅಧ್ಯಕ್ಷ ಜಿ.ಸಿ.ಜಯ ಸೋಮನಾಥ್ ಹಾಗೂ ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್ ಜಿಲ್ಲಾ ಮಹಿಳಾ ಘಟಕದ ಜಿಲ್ಲಾ ಸಂಚಾಲಕಿ ಪದ್ಮಾವತಿ ಶ್ರೀನಿವಾಸ್, ಮುಖ್ಯಶಿಕ್ಷಕ ಎಂ.ಧರಣೇಂದ್ರ ಮೂರ್ತಿ, ಲತಾ, ಶಿಕ್ಷಕರಾದ ಕಾಂತರಾಜು, ಯತೀಶ್, ಕೆ.ಸಿ.ಲತಾ, ಚಿದಾನಂದ ಮತ್ತಿತರಿದ್ದರು.