ಶೃಂಗೇರಿ ಆಸ್ಪತ್ರೆ ಆರೋಗ್ಯ ರಕ್ಷಾಸಮಿತಿ ಸಭೆಯಲ್ಲಿ ದಾದಿ ರೇಷ್ಮಾ ಅವರನ್ನು ಡಾ. ಶ್ರೀವೇಣಿ ಸನ್ಮಾನಿಸಿದರು. ಟಿ.ಡಿ.ರಾಜೇಗೌಡ, ದಿನೇಶ್ ಹೆಗಡೆ, ರಮೇಶ್ ಭಟ್, ಪೂರ್ಣಿಮಾ ಇತರರಿದ್ದರು. 
ಚಿಕ್ಕಮಗಳೂರು

ಸರ್ಕಾರಿ ಆಸ್ಪತ್ರೆಗೆ ಮೂಲಸೌಲಭ್ಯ ವ್ಯವಸ್ಥೆ

ಪ್ರಮುಖ ಮುಖ್ಯಾಂಶಗಳು

  • ತಾಪಂ ಕಚೇರಿ ಸ್ಥಳ
  • ಸರ್ಕಾರ ಬದ್ಧವಾಗಿದೆ
ಶೃಂಗೇರಿ: ಶಾಸಕನಾಗಿ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಕೂಡಾ ತೆರೆದಿದ್ದು ಜನರ ತುರ್ತು ಅಗತ್ಯಕ್ಕೆ ಸಂಬಂಧಪಟ್ಟ ವ್ಯವಸ್ಥೆ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ನಡೆದ ಆರೋಗ್ಯ ರಕ್ಷಾಸಮಿತಿ ಸಭೆಯಲ್ಲಿ ಮಾತನಾಡಿದರು. ಆಸ್ಪತ್ರೆ ನಿರ್ಮಾಣಕ್ಕಾಗಿ ತಾಪಂ ಕಚೇರಿ ಸ್ಥಳವನ್ನು ಪಡೆದುಕೊಂಡು ಸರ್ಕಾರದಿಂದ ಸೂಕ್ತ ಜಾಗವನ್ನು ತಾಪಂಗೆ ನೀಡುವ ಯೋಜನೆ ಇತ್ತು. ಆದರೆ ಜಾಗ ಲಭ್ಯವಿಲ್ಲದ ಕಾರಣ ಹೊನ್ನವಳ್ಳಿ ಸಮೀಪ ನೂರುಬೆಡ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ ಎಂದರು.
ಸರ್ಕಾರಿ ಆಸ್ಪತ್ರೆಯಲ್ಲಿ ಮುಖ್ಯವೈದ್ಯಾಧಿಕಾರಿ ಡಾ. ಶ್ರೀವೇಣಿ ತಂಡದ ಜತೆ ಕ್ಷೇತ್ರಮಟ್ಟದ ಆರೋಗ್ಯಾಧಿಕಾರಿ ಡಾ. ಮಹೇಂದ್ರ ಕಿರೀಟಿ ಅವರ ಮಾರ್ಗದರ್ಶನದಲ್ಲಿ ಬಡಜನತೆಗೆ ಆರೋಗ್ಯಸೇವೆ ಲಭ್ಯವಾಗುತ್ತಿದೆ. ಗ್ರಾಮೀಣ ಭಾಗಕ್ಕೆ ಸೇವೆ ಸಲ್ಲಿಸಲು ವೈದ್ಯರು ಬರುವುದು ಬಹಳ ಕಷ್ಟ. ಲಭ್ಯವಿರುವ ವೈದ್ಯರ ಸೇವೆ ಸದಾ ಇದ್ದು ಮುಂಬರುವ ದಿನಗಳಲ್ಲಿ ಹೆಚ್ಚುವರಿ ವೈದ್ಯರನ್ನು ನೇಮಿಸಲು ಪ್ರಾಮಾಣಿಕವಾಗಿ ಯತ್ನಿಸಲಾಗುವುದು ಎಂದರು.
ವರ್ಗಾವಣೆಗೊಂಡ ದಾದಿ ರೇಷ್ಮಾ ಅವರನ್ನು ಗೌರವಿಸಲಾಯಿತು. ಡಾ. ಶ್ರೀವೇಣಿ, ರಕ್ಷಾ ಸಮಿತಿ ಸದಸ್ಯರಾದ ಪೂರ್ಣಿಮಾ ಸಿದ್ದಪ್ಪ, ರಾಜಕುಮಾರ್ ಹೆಗಡೆ, ನಾಗೇಶ್, ತಾಪಂ ಇಒ ಸುದೀಪ್ ಇದ್ದರು.